ಚಾಮರಾಜನಗರ: ಬೆಂಗಳೂರು ಸಮೀಪದ ಡಿ.ಜೆ.ಹಳ್ಳಿಯಲ್ಲಿ ವ್ಯಾಪ್ತಿಯಲ್ಲಿ ಉದ್ದೇಶಪೂರಕವಾಗಿ ಗಲಾಟೆ ನಡೆಸಿ, ಸಾರ್ವಜನಿಕರ ಅಸ್ತಿಪಾಸ್ತಿಗಳಿಗೆ ಹಾನಿ ಹಾಗೂ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿರುವ ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ಬ್ಯಾನ್ ಮಾಡಬೇಕೇಂದು ಆಗ್ರಹಿಸಿದ ನಗರದಲ್ಲಿಂದು ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಹೊರಟ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಎಸ್ಡಿಪಿಐ ಹಾಗು ಪಿಎಫ್ಐ ಸಂಘಟನೆಗಳ ವಿರುದ್ದ ದಿಕ್ಕಾರ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಭವನ ತಲುಪಿ, ಜಿಲ್ಲಾಡಳಿತ ಭವನದ ಮುಂಭಾಗ ಕೆಲಕಾಲ ಧರಣಿ ನಡೆಸಿ, ಸ್ಥಳಕ್ಕಾಗಮಿಸಿದ ಶಿರಸ್ತೇಧಾರ್ ಧನುಷ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿ ಹಿಂದು ಜಾಗರಣಾ ವೇದಿಕೆಯ ಮುಖಂಡರು, ದೇಶದಲ್ಲಿ ಅರಾಜುಕತೆಯನ್ನು ಸೃಷ್ಟಿ ಮಾಡಿ ಜನರಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇಂಥ ಕೃತ್ಯಗಳು ಎಸ್ಡಿಪಿಐ ಹಾಗು ಪಿಎಫ್ಐ ಸಂಘಟನೆಗಳು ಮಾಡುತ್ತಿವೆ. ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದಿರುವ ಕೃತ್ಯ ಉದ್ದೇಶಪೂರ್ವಕ ಹಾಗೂ ಪೂರ್ವನಿಯೋಜಿತ ಕೃತ್ಯವಾಗಿದೆ. ಮನೆಗೆ ನುಗ್ಗಿ ಧಾಂದಲೆ ಮಾಡಿರುವುದಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೋಟ್ಯಾಂತರ ರೂ> ಮೌಲ್ಯದ ಅಸ್ತಿಪಾಸ್ತಿಯನ್ನು ನಷ್ಟ ಉಂಟು ಮಾಡಿದ್ದಾರೆ. ಘಟನೆಯಲ್ಲಿ ಅಮಾಯಕ ಪೊಲೀಸರು, ಪತ್ರಕರ್ತರು ಹಾಗು ಸಾರ್ವಜನಿಕರು ಗಾಯಗೊಂಡಿದ್ದಾರೆ. ಇಂಥ ಪ್ರಚೋದಿತ ದಾಳಿಗಳು ದೇಶದ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ಸಂಘಟನೆಗಳನ್ನು ರದ್ದುಪಡಿಸುವ ಮೂಲಕ ಇಂಥ ಘಟನೆಗಳಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಬಂಧಿಸಿ, ಉಗ್ರವಾದ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಹೇಂದ್ರ ಗಾಳಿಪುರ, ಜಿಲ್ಲಾ ಸಂಚಲಕ ಶಶಾಂಕ್ ಮದ್ದೂರು, ನಗರ ಘಟಕದ ಅಧ್ಯಕ್ಷ ಪ್ರದೀಪ್, ತಾಲೂಕು ಅಧ್ಯಕ್ಷ ವಿಜಯ ಬ್ಯಾಡಮೂಡ್ಲು, ನಗರ ಕಾರ್ಯದರ್ಶಿ ಮಹೇಶ್, ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ಸತೀಶ್, ಜಿಲ್ಲಾ ಕಾರ್ಯದರ್ಶಿ ಮಧು, ಚುಡಾ ಅಧ್ಯಕ್ಷ ಶಾಂತಮೂರ್ತಿ, ಮಾಜಿ ಅಧ್ಯಕ್ಷ ಬಾಲಸುಬ್ರಮಣ್ಯ, ಮುಖಂಡರಾದ ನಟರಾಜು, ಚಂದ್ರಶೇಖರ್, ಎಂ.ಎಸ್. ಚಂದ್ರಶೇಖರ್, ಚಿಕ್ಕರಾಜು, ಜಿಲ್ಲಾ ಪ್ರಚಾರಕ್ ಪ್ರಶಾಂತ್, ಮುರಳಿ, ಗುರುಪ್ರಸಾದ್, ನಂದಿ ಪ್ರಸಾದ್,ಲ ಲೊಕೇಶ್, ಸೂರ್ಯಕುಮಾರ್, ನಾಗರಾಜು, ಆನಂದಭಗೀರಥ ಇತರರು ಇದ್ದರು.