Wednesday, August 17, 2022

Latest Posts

ಬೆಂಗಳೂರಿನಲ್ಲಿ ನೌಕರಿ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ 1,400 ಮಂದಿ ವೋಲಾ ಕ್ಯಾಬ್ ಚಾಲಕರು!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರಸಕ್ತ ಐಟಿ, ಬಿಟಿ ಅಲ್ಲದೆ ಬಹುತೇಕ ಕಾರ್ಪೋರೇಟ್ ಮತ್ತು ಪಬ್ಲಿಕ್ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ವೋಲಾ ಕ್ಯಾಬ್ ಕಂಪನಿಯ ಸುಮಾರು 1,400 ಮಂದಿ ನೌಕರಿ ಕಳೆದುಕೊಳ್ಳುವಂತಾಗಿದೆ.
ಕೊರೋನಾ ಸೋಂಕಿನ ಪರಿಣಾಮವಾಗಿ ನಗರದ ಬಹುತೇಕ ಕಾರ್ಪೋರೇಟ್ ಕಂಪನಿಗಳ ಕಾರ್ಯವಿಧಾನ ಬದಲಾಗಿದ್ದು ಇದು ವೋಲಾ ಕ್ಯಾಬ್ ಸೇವೆಗಳ ಮೇಲೆ ನೇರ ಪರಿಣಾಮ ಬೀರಿದೆ. ಶೇಕಡಾ 70 ರಷ್ಟು ಮಂದಿ ಈಗ ಮನೆಯಿಂದಲೇ ಕಂಪನಿ ಕೆಲಸ ಮಾಡಲು ಆರಂಭಿಸಿರುವುದರಿಂದ ವೋಲಾ ಕ್ಯಾಬ್‌ಗಳಿಗೆ ಬೇಡಿಕೆ ಇಲ್ಲದಂತಾಗಿದೆ . ಈ ಕಾರಣದಿಂದ ಕಂಪನಿ ಸುಪರ್ದಿನಲ್ಲಿ ಕ್ಯಾಬ್ ಚಾಲಕರನ್ನು ಆರ್ಥಿಕವಾಗಿ ನಿಭಾಯಿಸುವುದು ಕಷ್ಟ ಎಂದು ಕಂಪನಿಯ ಸಿಈಓ, ಪ್ರಧಾನ ಕಚೇರಿಯ ಆಡಳಿತವರ್ಗಕ್ಕೆ ಮನವಿ ಸಲ್ಲಿಸಿದ್ದಾರೆ. ವೋಲಾ ಕಂಪನಿ ಹೆಸರಿನಲ್ಲಿ ಸಾವಿರಾರು ಕ್ಯಾಬುಗಳು ಓಡಾಡುತಿದ್ದು ಈ ಕ್ಯಾಬ್ ವಾಹನ ಚಾಲಕರಿಗೆ ವೇತನ ಮತ್ತಿತರ ಸೌಲತ್ತುಗಳನ್ನು ಕಂಪನಿ ಆಡಳಿತವರ್ಗವೇ ಒದಗಿಸಬೇಕಿದೆ.
ಟೆಕ್ಕಿಗಳಲ್ಲದೆ ಸಾರ್ವಜನಿಕರೂ ಈಗ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಬ್‌ಗಳಲ್ಲಿ ಓಡಾಡುತ್ತಿಲ್ಲ. ರೈಲು ಬಸ್ ಹಾಗೂ ವಿಮಾನಗಳ ಹಾರಾಟವೂ ಇಲ್ಲವಾಗಿದ್ದರಿಂದ ಇದು ವೋಲಾ ಕ್ಯಾಬ್ ಸೇವೆಗಳ ಮೇಲೆ ಅಡ್ಡ ಪರಿಣಾಮ ಉಂಟಾಗಿದೆ. ಪ್ರತಿ ನಿತ್ಯ ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಲಕ್ಷ ವೋಲಾ, ಊಬರ್ ಕ್ಯಾಬ್‌ಗಳು ಸಂಚರಿಸುತ್ತವೆ. ಇದರಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೇ ಅಧಿಕ ಪ್ರಮಾಣದಲ್ಲಿ ಕ್ಯಾಬ್ ಸಂಚರಿಸಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!