Tuesday, January 19, 2021

Latest Posts

ಬೆಂಗಳೂರಿನಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ಶಾಕ್ : ಗ್ರಾಹಕರಿಗೆ ತಟ್ಟಲಿದೆ ದರ ಹೆಚ್ಚಳದ ಬಿಸಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಹೊಸ ವರ್ಷ ಕಾಲಿಡುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆ ಪರ್ವ ಕೂಡಾ ಶುರುವಾಗಿದೆ. ರಾಜ್ಯದ ಜನತೆಗೆ ಇದೀಗ ವಿದ್ಯುತ್ ಕಂಪೆನಿಗಳು ಬೆಲೆ ಏರಿಕೆ ಶಾಕ್ ನೀಡಲಿವೆ. ಬೆಂಗಳೂರಿನಲ್ಲಿ ಏಪ್ರಿಲ್‌ನಿಂದ ಮತ್ತೆ ವಿದ್ಯುತ್ ದರ ಏರಿಕೆಯಾಗಲಿದ್ದು , ಬೆಸ್ಕಾಂ 1.39 ರೂ. ಏರಿಸಲು  ರಾಜ್ಯ ವಿದ್ಯುತ್ ಆಯೋಗ – ಕೆಇಆರ್ ಸಿ ಆದೇಶ ಹೊರಡಿಸಿದೆ.
ವಿದ್ಯುತ್ ಕಂಪನಿಗಳ ನಷ್ಟ ಸರಿದೂಗಿಸಲು ಗ್ರಾಹಕರ ಮೇಲೆ ಬೆಲೆ ಏರಿಕೆ (ಬರೆ ಎಳೆಯಲಾಗುತ್ತಿದೆ. ವಿದ್ಯುತ್ ಕಂಪನಿಗಳ ನಷ್ಟದ ಪ್ರಮಾಣ ತಪ್ಪಿಸಲು ಕೆಇಆರ್ ಸಿ ಈ ಆದೇಶ ಹೊರಡಿಸಿದೆ.
ಜನವರಿ 1 ರಿಂದ ಮಾರ್ಚ್ 31ರವರೆಗೆ ಸೀಮಿತವಾಗಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 4 ರಿಂದ 8 ಪೈಸೆವರೆಗೆ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಿ ರಾಜ್ಯ ವಿದ್ಯುತ್ ಆಯೋಗ ಆದೇಶ ನೀಡಿದೆ. ಹಾಗಾಗಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮುಟ್ಟುವುದು ಖಚಿತವಾಗಿದೆ. ನವೆಂಬರ್ ನಿಂದ ಇದುವರೆಗೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಸಲ ವಿದ್ಯುತ್ ಬೆಲೆ ಏರಿಕೆ ಮಾಡಲಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!