ಮಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯನ್ನು ಹತೋಟಿಗೆ ತರಲು ನಿಯಮ ಉಲ್ಲಂಘಿಸುವ ಸವಾರರಿಂದ ದಂಡ ವಸೂಲಿ ಮಾಡಲಾಗುತ್ತದೆ. ಒಂದು ವಾರದಲ್ಲಿ ಸಂಚಾರಿ ಪೊಲೀಸರು ಒಟ್ಟು 3.63 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವ ಬಗ್ಗೆ 28,201 ಪ್ರಕರಣಗಳು ದಾಖಲಾಗಿದ್ದು, 1.02 ಕೋಟಿ ರೂ. ದಂಡ ಸಂಗ್ರಹ.
ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದ 4,827 ಪ್ರಕರಣಗಳು ದಾಖಲಾಗಿದ್ದು, 22,92 ಲಕ್ಷ ರೂ. ದಂಡ ಸಂಗ್ರಹ.
ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವ ಬಗ್ಗೆ 17,105 ಪ್ರಕರಣಗಳು ದಾಖಲಾಗಿದ್ದು, 62.38 ಲಕ್ಷ ರೂ. ಸಂಗ್ರಹ.
ಸಂಚಾರ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿರುವ 2,448 ಪ್ರಕರಣ ದಾಖಲಾಗಿದ್ದು, 16.83 ಲಕ್ಷ ರೂ. ಸಂಗ್ರಹ.
ನಿಷೇಧಿತ ರಸ್ತೆಗಳಲ್ಲಿ ಸಂಚಾರ ಮಾಡಿರುವ 3,790 ಪ್ರಕರಣ ದಾಖಲಾಗಿದ್ದು, 14.45 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.