ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಲೇ ಇದೆ. ಶನಿವಾರ ದಾಖಲೆಯ ೩,೫೫೨ ಜನರಲ್ಲಿ ಕೊರೋನಾ ಸೋಂಕು ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ ೧,೬೭,೧೮೩ಕ್ಕೆ ಏರಿಕೆಯಾಗಿದೆ.
ಸತತ ೫ ದಿನಗಳಿಂದ ಮೂರು ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ನಗರದಲ್ಲಿ ಪತ್ತೆಯಾಗುತ್ತಿದೆ. ನಿನ್ನೆ ದಾಖಲೆಯ ೩,೫೫೨ ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.
ನಿನ್ನೆ ೩,೫೩೮ ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ೨೧ ಮಂದಿ ಮೃತ ಪಟ್ಟಿದ್ದಾರೆ. ನಗರದಲ್ಲಿ ಇನ್ನೂ ೪೦.೯೨೯ ಸಕ್ರಿಯ ಪ್ರಕರಣಗಳಿವೆ.