ಬೆಂಗಳೂರಿನಿಂದ ಆಗಮಿಸಿದ ಮಹಿಳೆಗೆ ಕೊರೋನಾ: ಮಂಗಳೂರಿನ ನಡುಮನೆ, ಕುಟ್ಟಿಕಲ ಸೀಲ್‌ಡೌನ್

0
288

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ 40 ವರ್ಷದ ಮಹಿಳೆಯಲ್ಲಿ ಬುಧವಾರ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಆಕೆ ವಾಸವಿದ್ದ ಮಂಗಳೂರು ತಾಲೂಕಿನ ನೀರುಮಾರ್ಗ ಕುಟ್ಟಿಕಲ, ಕುಡುಪು ಗ್ರಾಮದ ನಡುಮನೆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಈ ಎರಡೂ ಪ್ರದೇಶಗಳನ್ನೂ ಸೀಲ್‌ಡೌನ್ ಮಾಡಲಾಗಿದೆ.
ಈ ಎರಡೂ ಪ್ರದೇಶದಲ್ಲಿ ಸೋಂಕಿತ ಮಹಿಳೆ ಸಮಾನ ದಿನಗಳಲ್ಲಿ ವಾಸವಿದ್ದ ಹಿನ್ನೆಲೆಯಲ್ಲಿ ಎರಡೂ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಕುಡುಪುವಿಗೆ ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತರು (ಅಭಿವೃದ್ಧಿ), ನೀರುಮಾರ್ಗಕ್ಕೆ ಮಂಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.

LEAVE A REPLY

Please enter your comment!
Please enter your name here