Friday, August 12, 2022

Latest Posts

ಬೆಂಗಳೂರಿನಿಂದ ಮಂಗಳೂರಿಗೆ ಬಂದ ವಿಮಾನ: 13 ಮಂದಿ ನೇರ ಕ್ವಾರಂಟೈನ್ ಗೆ

ಮಂಗಳೂರು: ಮಂಗಳೂರಿಗೆ ಬೆಂಗಳೂರಿನಿಂದ ಸೋಮವಾರ ರಾತ್ರಿ 47 ಮಂದಿ ಪ್ರಯಾಣಿಕರು ಆಗಮಿಸಿದ್ದು, ಈ ಪೈಕಿ 13 ಮಂದಿಯನ್ನು ಜಿಲ್ಲಾಡಳಿತ ಕ್ವಾರಂಟೈನ್ ಗೆ ಒಳಪಡಿಸಿದೆ.  ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲರ ಸ್ಕ್ರೀನಿಂಗ್ ನಡೆದಿದ್ದು, ದೆಹಲಿ ಮತ್ತು ಪುಣೆಯಿಂದ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಆಗಮಿಸಿದ 47 ಮಂದಿಯಲ್ಲಿ 13 ಮಂದಿ ದೆಹಲಿ, ಪುಣೆ ಸೇರಿದಂತೆ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಇವರನ್ನು ಕ್ವಾರಂಟೈನ್ ಗೆ ಒಳಪಡಿಸಿದರೆ ಉಳಿದವರನ್ನು ಸೂಕ್ತ ಮಾರ್ಗದರ್ಶನ ನೀಡಿ ಹೋಮ್ ಕ್ವಾರಂಟೈನ್‌ಗೆ ಕಳುಹಿಸಿಕೊಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss