Friday, August 19, 2022

Latest Posts

ಬೆಂಗಳೂರಿನ ಗಲಭೆ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ

ತುಮಕೂರು: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಗಳಿಗೆ ಕಾರಣರಾದವರ ವಿರುದ್ಧ ಮುಲಾಜಿಲ್ಲದೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದರು.  ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಅಲ್ಲಿನ ಶಾಸಕರ ಮನೆಯನ್ನು ಗುರಿಯಾಗಿಟ್ಟುಕೊಂಡು ಪೊಲೀಸ್ ಠಾಣೆ.ಸಾರ್ವಜನಿಕರ ಮನೆಗಳನ್ನು ಧ್ವಂಸ ಮಾಡಿರುವುದು ಖಂಡನೀಯವಾದುದು ಎಂದು ಅವರು ಮುಖ್ಯಮಂತ್ರಿ ಗಳಿಗೇ ಕೆರೆ ಸಲ್ಲಿಸಿರುವ ಮನವಿಯಲ್ಲಿ ಅಭಿಪ್ರಾಯ ಪಟ್ಟಿದ್ಧಾರೆ.
ಸಮಾಜ ವಿರೋಧಿ ಸಂಘಟನೆ ಗಳಿದ್ದ ಎಸ್. ಡಿ.ಪಿ.ಐ ಮತ್ತು ಪಿಎಫ್ ಐ ಸಂಘಟನೆಗಳು ಬೆಂಗಳೂರನ್ನು ಪಾಕಿಸ್ತಾನ ಮಾಡಲು ಹೊರಟಿವೆ ಎಂದು ಅವರು ಆರೋಪಿಸಿದರು.  ಕಾಂಗ್ರೆಸ್ ಶಾಸಕರ ಮನೇಯೆ ಈ ದಾಳಿಯ ಗುರಿಯಾಗಿದ್ದರೂ ಸಹ ವಿಪಕ್ಷನಾಯಕರಿಗೆ ನಾಯಕ ಸಿದ್ಧ ರಾಮಯ್ಯ ಅವರ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ ಎಂದರು. ಅವರು ಮತ್ತು ಕಾಂಗ್ರೆಸ್ ನವರು
ಮೀರ್ ಸಾಧಿಕ್ ರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ನೆಹರು ಕುಟುಂಬದ ಆಡಳಿತ ದಿಂದ ದೇಶ ಇಂದು ಸಂದಿಗ್ದ ಪರಿಸ್ಥಿತಿಯಲ್ಲಿದೆ ಎಂದರು. ಬಿಜೆಪಿ ಮುಖಂಡರಾದ ಕೆ.ಪಿ.ಮಹೇಶ್, ರೇಣುಕಾರಾಧ್ಯ,ಹರೀಶ್, ಮದನಸಿಂಗ್,ಅಂಜನಮೂರ್ತಿ.ಹಾಲನೂರು ಬಾಬು ಪತ್ರಿಕಾ ಘೋಷ್ಠಿಯಲ್ಲಿದ್ಧರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!