ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಎಸ್ಆರ್ಟಿಸಿ ಬಸ್ನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದೆ. ಇದಕ್ಕೆ ಸ್ತ್ರೀ ಶೌಚಾಲಯವೆಂದು ಹೆಸರಿಡಲಾಗಿದೆ.
ಶೌಚಾಲಯದ ಸಂಪೂರ್ಣ ವೆಚ್ಚ ೧೨ ಲಕ್ಷವಾಗಿದ್ದು, ವೆಚ್ಚವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಾಮಾಜಿಕ ಕಳಕಳಿ ಯೋಜನೆ ಅಡಿಯಲ್ಲಿ ನೀಡಲಿದ್ದಾರೆ.
ಶೌಚಾಲಯದಲ್ಲಿ ಮಕ್ಕಳಿಗೆ ನ್ಯಾಪ್ಕಿನ್ ಬದಲಿಸುವ ಸ್ಥಳ, ನ್ಯಾಪಕಿನ್ ವೆಂಡಿಂಗ್ ಯಂತ್ರ, ಮಗುವಿಗೆ ಹಾಲುಣಿಸುವ ಸ್ಥಳ, ನೆನ್ಸಾರ್ ದೀಪಗಳು, ಸೋಲಾರ್, ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ಬೇಸಿನ್ಗಳು ಇವೆ.