ಬೆಂಗಳೂರು: ನಗರದ ಟ್ಯಾಂಕ್ಬಂಡ್ ರಸ್ತೆಯಲ್ಲಿ ಮರವು ಇದ್ದಕ್ಕಿದ್ದಂತೆ ರಸ್ತೆಗೆ ಉರುಳಿದೆ. ಮರದ ಅಡಿಯಲ್ಲಿ ಸಿಲುಕಿದ್ದ ಆಟೊ ಜಖಂ ಆಗಿದೆ.
ಇಮದು ಬೆಳಿಗ್ಗೆ ೬.೩೦ರ ಸುಮಾರಿಗೆ ಈ ಘಟನೆ ನಡೆದಿದ್ದು. ನಗರದ ಟ್ಯಾಂಕ್ಬಂಡ್ ರಸ್ತೆಯಲ್ಲಿ ಈ ಮರ ಬಿದ್ದಿದೆ. ಮರದ ಅಡಿಯಲ್ಲಿ ಸಿಲುಕಿದ ಆಟೊ ಪೂರ್ತಿ ಜಖಂ ಆಗಿದೆ.
ಆಟೋದಲ್ಲಿ ಇದ್ದ ಆಟೊ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಮತ್ತು ಬಿಬಿಎಂಪಿ ಸಿಬಂದಿ ಸ್ಥಳಕ್ಕೆ ಬಂದು ಮರವನ್ನು ತೆರವು ಗೊಳಿಸಿದ್ದಾರೆ.