Thursday, July 7, 2022

Latest Posts

ಬೆಂಗಳೂರು| ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ: ಧನ್ಯವಾದ ತಿಳಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ

ಬೆಂಗಳೂರು: ಕೇಂದ್ರ ಸಂಪುಟ 15,767 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಕಾರ್ಯ ನಡೆಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನರ ಬಹುದಿನದ ಬೇಡಿಕೆಯಾಗಿರುವ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಯವರು ರೂಪುರೇಷೆ ಹಾಕಲಾಗಿದೆ. ಉಪಚುನಾವಣೆ ಹಿನ್ನಲೆ ಕೇಂದ್ರ ಸರ್ಕಾರವಾಗಲಿ ರೈಲ್ವೇ ಇಲಾಖೆಯಾಗಲಿ ಮಾಹಿತಿ ಘೋಷಣೆ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ರೈಲು 148.17 ಕಿ.ಮೀ ಉದ್ದದ ರೈಲು ಸಂಪರ್ಕ ಹೊಂದಿಸಲು ಈ ಯೋಜನೆಗೆ ಒಟ್ಟು 18,621 ಕೋಟಿ ವೆಚ್ಚವನ್ನು ಮೊದಲಿಗೆ ಪ್ರಸ್ತಾಪ ಮಾಡಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಣ ಹೂಡಿಕೆಯ ಬಳಿಕ ಬ್ಯಾಂಕ್ ನಿಂದ ಸಾಲ ಪಡೆಯಲು ತೀರ್ಮಾನಿಸಲಾಗಿತ್ತು.

ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss