Monday, August 15, 2022

Latest Posts

ಬೆಂಗಳೂರು ಕೆಮಿಕಲ್ ಫ್ಯಾಕ್ಟರಿ ಅಗ್ನಿ ದುರಂತ: ಅಸಲಿ ಸ್ಟೋರಿ ಏನ್ ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರಿನ ಹೊಸಗುಡ್ಡದಹಳ್ಳಿಯಲ್ಲಿ ರೇಖಾ ಕೆಮಿಕಲ್ ಫ್ಯಾಕ್ಟರಿಯಿಂದ ಬರೋಬ್ಬರಿ 24 ಗಂಟೆಗಳಿಂದ ಬೆಂಕಿಯ ಕೆನ್ನಾಲಿಗೆಯಿಂದ ಸ್ಥಳಿಯ ಮನೆಗಳಿಗೂ ಹಾನಿಯಾಗಿದೆ. ಪ್ರಕರಣದ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು, ಫ್ಯಾಕ್ಟರಿ ಮಾಲಿಕ ಸಜ್ಜಾನ್ ಕಾರ್ಖಾನೆಯನ್ನು ರಿಜಿಸ್ಟರ್ ಮಾಡಿಸದೇ ಅಕ್ರಮವಾಗಿ ಕೆಲಸ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರೇಖಾ ಕೆಮಿಕಲ್ ಫ್ಯಾಕ್ಟ್ರಿ ಗಳ ರಾಸಾಯನಿಕಗಳನ್ನು ಹೊಸಗುಡ್ಡದಹಳ್ಳಿಯ ಗೋಡೌನ್ ನಲ್ಲಿ ಸುಮಾರು 25 ವರ್ಷಗಳಿಂದ ಸಂಗ್ರಹ ಮಾಡಲಾಗುತ್ತಿತ್ತು ಎಂದು ಮಾಹಿತಿ ತಿಳಿಸಿದೆ.

ಸದ್ಯ ಘಟನಾ ಸ್ಥಳದಲ್ಲಿ ಆರೋಪಿಗಳಿಬ್ಬರೂ ಇಲ್ಲದಿರುವುದರಿಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮಂಗಳವಾರ ಬೆಳಗ್ಗೆ ಸಂಭವಿಸಿದ ಈ ದುರಂತದಲ್ಲಿ ಒಂದು ಮನೆ ಸಂಪೂರ್ಣ ಸುಟ್ಟುಹೋಗಿದ್ದು, ಮನೆಯಲ್ಲಿನ ವಸ್ತುಗಳಿಗೆ ಹಾನಿಯಾಗಿ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಿಂದಿಸುವಲ್ಲಿ ನಿರತರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss