Saturday, June 25, 2022

Latest Posts

ಬೆಂಗಳೂರು| ಕ್ವಾರಂಟೈನ್ ನಲ್ಲಿ ಇರಲು ನಿರಾಕರಿಸಿದ 19 ಪ್ರಯಾಣಿಕರು: ಮತ್ತೆ ಬಂದ ಊರಿಗೆ ವಾಪಸ್

ಬೆಂಗಳೂರು: ದೆಹಲಿಯಿಂದ ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ಗುರುವಾರ ಬಂದಿದ್ದ ಪ್ರಯಾಣಿಕರ ಪೈಕಿ ಕ್ವಾರಂಟೈನ್ ಒಳಗಾಗಲು ಒಪ್ಪದ ಕಾರಣ 19 ಪ್ರಯಾಣಿಕರು ಮತ್ತೆ ದೆಹಲಿಗೆ ಹೋಗುವ ರೈಲು ಹತ್ತಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ದೆಹಲಿಯಿಂದ 500ಕ್ಕೂ ಹೆಚ್ಚು ಪ್ರಯಾಣಿಕರು ವಿಶೇಷ ರೈಲಿನ ಮೂಲಕ ಬಂದಿಳಿಯುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್ ಒಳಗಾಗುಂತೆ ಸೂಚಿಸಿದ್ದರು.

ಇದಕ್ಕೆ ಗರಂ ಆದ ಪ್ರಯಾಣಿಕರು ಕ್ವಾರಂಟೈನ್ ಗೆ ಒಳಪಡುವುದಿಲ್ಲ ಎಂದು ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದರು‌. ಈ ವೇಳೆ ಮಧ್ಯಪ್ರವೇಶಿಸಿದ ರೈಲ್ವೇ ಇಲಾಖೆಯ ಐಜಿಪಿ ಡಿ.ರೂಪಾ ಅವರು ಪರಿಸ್ಥಿತಿ ತಿಳಿಗೊಳಿಸಿ ಹಲವರನ್ನು ಕ್ವಾರಂಟೈನ್ ಒಳಗಾಗುವಂತೆ ಮನವೊಲಿಸಿದರು. ಮತ್ತೊಂದು ಪ್ರಯಾಣಿಕರ ಗುಂಪು ಇದಕ್ಕೆ ಒಪ್ಪದ ಕಾರಣ ಪರ್ಯಾಯ ಮಾರ್ಗವಾಗಿ ಅವರ ಬೇಡಿಕೆಯಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಪ್ರಯಾಣಿಕರನ್ನು ವಾಪಸ್ ಕಳುಹಿಸಲು ನಿರ್ಧರಿಸಲಾಯಿತು‌‌.

ಬಳಿಕ ನೈರುತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಗುರುವಾರ ರಾತ್ರಿ ರಾಜಧಾನಿಯಿಂದ ಹೋಗಬೇಕಿದ್ದ ದೆಹಲಿ ವಿಶೇಷ ರೈಲಿಗೆ ಹೆಚ್ಚುವರಿಯಾಗಿ ಬೋಗಿ ಅಳವಡಿಸಿ ವಾಪಸ್ ಹೋಗುವ ವ್ಯವಸ್ಥೆ ಮಾಡಲಾಯಿತು. ಇದರಲ್ಲಿ ಧರ್ಮಾವರಂ, ಸಿಕಂದರಬಾದ್ ಸೇರಿದಂತೆ ವಿವಿಧ ಪ್ರಯಾಣಿಕರು ಮತ್ತೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss