ಸ್ವೀಡನ್: ಇತ್ತೀಚಿಗಷ್ಟೆ ಇಸ್ಲಾಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾರಣ ನಡೆದ ಗಲಭೆಯ ಪ್ರತಿರೂಪವಂತೆ ಶುಕ್ರವಾರ ಸ್ವೀಡನ್ ನಲ್ಲಿ ಭಾರೀ ಗಲಭೆ ಸೃಷ್ಟಿಯಾಗಿದೆ.
ಸ್ವೀಡೀಷ್ ನ ಮಾಲ್ಮೋದಲ್ಲಿ ಇಸ್ಲಾಂ ವಿರೋಧ ಮಾತುಗಳನ್ನು ತಡೆಯಲು ತಡ ರಾತ್ರಿ ಸುಮಾರು 300ಕ್ಕೂ ಹೆಚ್ಚು ಜನ ಜಮಾಯಿಸಿ, ದಕ್ಷಿಣ ಸ್ವೀಡನ್ ನ ಬೀದಿಗಳಲ್ಲಿ ಟೈರ್ ಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ.
ಇಸ್ಲಾಮಿಕ್ ನ ಕುರಾನ್ ಪುಸ್ತಕವನ್ನು ಸುಟ್ಟುಹಾಕಿದ ಹಿನ್ನಲೆ ಗಲಭೆ ಕೋರರು ಪೊಲೀಸರ ಮೇಲೆ ಹಲ್ಲೆ ಮಾಡಿ, ಟೈರ್ ಗಳಿಗೆ ಬೆಂಕಿ ಹಚ್ಚಿ ದಾಂದಲೆ ನಡೆಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಲಪಂಥೀಯ ಡ್ಯಾನಿಶ್ ವಲಸೆ ವಿರೋಧಿ ಪಕ್ಷದ ಮುಖಂಡ ರಾಸ್ಮಸ್ ಪಲುಡಾನ್ ಭಾಗವಹಿಸಬೇಕಿತ್ತು. ಸ್ವೀಡಿಷ್ ಅಧಿಕಾರಿಗಳು ಪಲುಡಾನ್ ಆಗಮನವನ್ನು ಮೊದಲೇ ವಿರೋಧಿಸಿತ್ತು. ಮತ್ತು ಈ ಘಟನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ನಿಲ್ಲಿಸಲು ಅವರು ಎರಡು ವರ್ಷಗಳ ಕಾಲ ಸ್ವೀಡನ್ಗೆ ಪ್ರವೇಶಿಸುವುದನ್ನು ನಿಷೇಧಿಸಿದರು.