Wednesday, June 29, 2022

Latest Posts

ಬೆಂಗಳೂರು ಗಲಭೆ ಖಂಡಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ನಾಪೋಕ್ಲು(ಕೊಡಗು): ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ ದುಷ್ರ್ಕಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನಾಪೋಕ್ಲು ನಗರದಲ್ಲಿ ಬಜರಂಗ ದಳ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಖಂಡಿಸಿದ ಪ್ರತಿಭಟನಾಕಾರರು, ಈ ಕೃತ್ಯವೆಸಗಿದ ಆರೋಪಿಗಳನ್ನು ಗಡಿಪಾರು ಮಾಡುವುದರ ಜೊತೆಗೆ ಅವರ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಪಾಡಿಯಮ್ಮಂಡ ಮುರಳೀಧರ್ ಅವರು, ಬೆಂಗಳೂರಿನ ಘಟನೆ ಖಂಡನೀಯ. ಒಬ್ಬ ಜನಪ್ರತಿನಿಧಿಯ ಮನೆಗೆ ಬೆಂಕಿ ಹಚ್ಚುವುದಾದರೆ ಸಾಮಾನ್ಯ ನಾಗರಿಕರ ಪಾಡೇನು? ಇಂತಹ ಭಯೋತ್ಪಾದಕ ಸಂಘಟನೆಯನ್ನು ಸರಕಾರ ಕೂಡಲೇ ನಿಷೇಧಿಸಿ ದುಷ್ಕøತ್ಯ ಎಸಗಿದ ಮತೀಯ ಶಕ್ತಿಗಳಿಗೆ ಉಗ್ರ ಶಿಕ್ಷೆ ವಿಧಿಸಿ ಮುಂದೆ ಯಾರು ಸಹ ಇಂತಹ ಕೃತ್ಯ ಮಾಡದಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಂಗಾಂಡ ಜಾಲಿ ಪೂವಪ್ಪ ಮಾತನಾಡಿ, ಗಲಭೆಗೆ ಕುಮ್ಮಕ್ಕು ನೀಡುವ ಯಾರೇ ಆಗಲಿ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹೇಳಿದರು.
ಈ ಸಂದರ್ಭ ಬಿ.ಜೆ.ಪಿ. ಸ್ಥಾನೀಯ ಸಮಿತಿಯ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಜರಂಗದಳದ ಬಿ.ಎಂ ಪ್ರತೀಪ, ನಾಟೋಳಂಡ ಸಚಿನ್, ಕೆಲೇಟಿರ ಸಾಬು ನಾಣಯ್ಯ, ಶಿವಚಾಳಿಯಂಡ ಜಗದೀಶ್, ಕುಟ್ಟಂಜಟ್ಟೀರ ಪೂಣಚ್ಚ, ಕೆಲೇಟಿರ ದೀಪು ದೇವಯ್ಯ, ಚೋಕಿರ ಪ್ರಭು, ಕರವಂಡ ಅಪ್ಪಣ್ಣ, ರಾಧಾಕೃಷ್ಣ, ಸುಕುಮಾರ್, ಕಿರಣ್ ಕಾರ್ಯಪ್ಪ, ರತ್ನ ಪೆಮ್ಮಯ್ಯ, ಸತೀಶ್, ಸಂಪತ್ , ಕುಮಾರ, ಪ್ರತೀಶ್, ದೀಪು, ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss