Tuesday, August 9, 2022

Latest Posts

ಬೆಂಗಳೂರು ಗಲಭೆ: ಡಿಜೆ ಹಳ್ಳಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ NIA

ಬೆಂಗಳೂರು: ಕಳೆದ ತಿಂಗಳು ಡಿಜೆ ಹಳ್ಳಿ, ಕೆಜಿ ಹಳ್ಳಿ ಯಲ್ಲಿ ನಡೆದ ಹಿಂಸಾಚರ ಕೃತ್ಯಕ್ಕೆ ಸಂಬಂಧಿಸಿದಂತೆ ಎನ್ ಐಎ ತನಿಖೆ ಪ್ರಾರಂಭಿಸಿದೆ.

ಹಿರಿಯ ಎನ್‌ಐಎ ಅಧಿಕಾರಿ ಮತ್ತು ಅವರ ತಂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಈಗಾಗಲೇ 12 ಸ್ಥಳಗಳಲ್ಲಿ ಎನ್ ಐಎ ದಾಳಿ ನಡೆಸುತ್ತಿದೆ ಎಂದು ಎನ್ಐಎ ಹೇಳಿದೆ.

ಆಗಸ್ಟ್ 11 ರಂದು ದುಷ್ಕರ್ಮಿಗಳು ಡಿಜೆ ಹಳ್ಳಿ ಪೊಲೀಸ್ ಠಾಣೆ ಮತ್ತು ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿ ದ್ವಂಸ ಮಾಡಿದ್ದರು. ಆಗಸ್ಟ್ 12 ರಂದು ಡಿಜೆ ಹಲ್ಲಿ ಮತ್ತು ಕೆಜಿ ಹಲ್ಲಿ ಪೊಲೀಸ್ ಠಾಣೆಗಳಲ್ಲಿ ನೋಂದಾಯಿಸಲ್ಪಟ್ಟ ಎಫ್‌ಐಆರ್‌ಗಳ ಆಧಾರದ ಮೇಲೆ, ಎನ್‌ಐಎ ಎರಡು ಪ್ರಕರಣಗಳನ್ನು ಪುನಃ ದಾಖಲಿಸಿದೆ (ಆರ್‌ಸಿ -34 / 2020 ಮತ್ತು ಆರ್‌ಸಿ -35 / 2020 ಎಂದು ತನಿಖಾ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss