Saturday, July 2, 2022

Latest Posts

ಬೆಂಗಳೂರು ಗಲಭೆ ಪ್ರಕರಣ: ಮಾದಾಪುರದಲ್ಲಿ ಹಿಂಜಾವೇ ಪ್ರತಿಭಟನೆ

ಸುಂಟಿಕೊಪ್ಪ: ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ಮತಾಂಧರು ನಡೆಸಿದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಹಿಂದೂ ಜಾಗರಾಣ ವೇದಿಕೆ ವತಿಯಿಂದ ಮಾದಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನಲ್ಲಿ ಮಚ್ಚು, ಕಲ್ಲು, ಪೆಟ್ರೋಲ್ ಬಾಂಬ್, ಚೂರಿ ಸೇರಿದಂತೆ ಮಾರಕಾಸ್ತ್ರಗಳನ್ನು ಬಳಸಿ ಪುಲಿಕೇಶಿ ಕ್ಷೇತ್ರದ ಶಾಸಕರ ಮನೆಯ ಮೇಲೆ ಹಾಗೂ ಕಂಡ ಕಂಡ ಅಮಾಯಕರ ಮನೆಗಳಿಗೆ, ಪೊಲೀಸ್ ಠಾಣೆಗೆ, ಪೊಲೀಸರ ಮೇಲೆ ದಾಳಿ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿ ಕೋಟ್ಯಂತರ ರೂ. ನಷ್ಟಪಡಿಸಿದ ಎಸ್‍ಡಿಪಿಐ, ಪಿಎಫ್‍ಐ ಕಾರ್ಯಕರ್ತರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕ. ಇವರಿಗೆ ಪ್ರಚೋದನೆ ನೀಡಿದವರನ್ನು ಬಂಧಿಸಬೇಕು. ಈ ಸಂಘಟನೆಗಳನ್ನು ನಿಷೇಧಿಸಬೇಕು. ದುಷ್ಕøತ್ಯ ಎಸಗಿ ಅಸ್ತಿ ಪಾಸ್ತಿ ನಷ್ಟ ಮಾಡಿ ದೇಶದ್ರೋಹದ ಕೃತ್ಯವೆಸಗಿದ ವ್ಯಕ್ತಿಗಳನ್ನು ಪತ್ತೆಹಚ್ಚಿ ಸರಕಾರ ಅವರ ಅಸ್ತಿ ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಸುನಿಲ್, ಪದಾಧಿಕಾರಿಗಳಾದ ಕೇಶವ, ವಿನು, ಸತೀಶ, ಆಶೋಕ, ಗ್ರಾ.ಪಂ.ಮಾಜಿ ಸದಸ್ಯ ನಾಪಂಡ ಉತ್ತಪ್ಪ, ಶರಣು, ರಾಮಪ್ಪ ಮೊದಲಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss