ಬೆಂಗಳೂರು: ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.
ಕಲ್ಲು ತೂರಾಟ ನಡೆಸಿದ ಶಂಕಿತ ಉಗ್ರ ಜೈದ್ ಎಂಬಾತನನ್ನು ಸಿಸಿಬಿಯ ಒಸಿಡಬ್ಲೂ ಸಿಬ್ಬಂದಿ ಬಂಧಿಸಿದ್ದಾರೆ.
ಈತ ಗಲಭೆ ವೇಳೆ ಕಲ್ಲು ತೂರಾಟ ನಡೆಸಿದ್ದು, ಸಾಕಷ್ಟು ಮಂದಿ ನೋವು ಅನುಭವಿಸಿದ್ದಾರೆ. ಈತನ ಭಾವ ಅಫ್ರೀದಿ ಎಂಬಾದ ಬೆಂಗಳೂರಿನ ಚರ್ಚ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು. ಈತನಿಗೂ ಉಗ್ರರ ನಂಟು ಇರಬಹುದು ಎಂಬ ಅನುಮಾನದ ಮೇರೆಗೆ ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.