Wednesday, August 10, 2022

Latest Posts

ಬೆಂಗಳೂರು ಗಲಾಟೆ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಹುನ್ನಾರ: ಸಚಿವ ಜಗದೀಶ ಶೆಟ್ಟರ್

ಧಾರವಾಡ: ಬೆಂಗಳೂರು ಗಲಾಟೆ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕದಡುವ ಹುನ್ನಾರವಾಗಿದೆ. ಇವರಿಗೆ ಕಾನೂನು ಕೈಗೆ ಎತ್ತಿಕೊಳ್ಳುವ ಅಧಿಕಾರ ಕೊಟ್ಟರ‍್ಯಾರು? ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಸರಿದೂಗಿಸಲು ಸರ್ಕಾರ ಗಲಾಟೆ ಮಾಡಿದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೆöದು ಸಾವಿರ ಜನ ಶಾಸಕರ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು, ಪೊಲೀಸ್ ಠಾಣೆಗೆ ನುಗ್ಗಿ ದಾಳಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ? ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ದೂರು ನೀಡಬೇಕಿತ್ತು. ಕಾನೂನು ಹೋರಾಟ ಜೊತೆಗೆ ಪ್ರತಿಭಟನೆ ಮಾಡಬೇಕಿತ್ತು. ಕಾನೂನು ಕೈಗೆ ತೆಗೆದಕೊಂಡಿದ್ದು ಸರಿಯಲ್ಲ ಎಂದು ಹೇಳಿದರು.
ಇಂತಹ ಗಲಾಟೆ ನಡೆದರೆ ಗಲಾಟೆ ಮಾಡಿದ ವ್ಯಕ್ತಿಗಳಿಂದ ವಸೂಲಿ ಮಾಡಬೇಕು. ಶಾಸಕರ ಹಾಗೂ ಅಕ್ಕಪಕ್ಕದವರ ಮನೆ ಹಾನಿ ಆಗಿವೆ. ಪೊಲೀಸ್ ಠಾಣೆ ಹಾನಿಯಾಗಿದೆ. ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಎಲ್ಲವನ್ನು ಸರ್ಕಾರವೇ ಭರಿಸಬೇಕಾ? ಹಾನಿ ಮಾಡಿದ ಜನರಿಂದಲೇ ನಷ್ಟ ಭರಿಸುವ ಕಾನೂನು ಜಾರಿಗೆ ತಂದಾಗಲೇ ಗಲಾಟೆ ಮಾಡುವ ಜನರಿಗೆ ಭಯ ಹುಟ್ಟಲಿದೆ ಎಂದು ತಿಳಿಸಿದರು.
ಇಂತಹ ಕಾನೂನು ತರಲು ಎಲ್ಲ ರೀತಿಯ ಪ್ರಯತ್ನ ಸರ್ಕಾರ ಮಾಡಲಿದೆ. ಗಲಾಟೆಗೆ ಸಂಬoಧಿಸಿ ಕೆಲವು ಸಂಘಟನೆ ನಿಷೇಧ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗೃಹ ಇಲಾಖೆ ಅಧ್ಯಯನ ಮಾಡುತ್ತಿದೆ. ಯಾವುದಾದರೂ ಸಂಸ್ಥೆಗಳು ನೇರವಾಗಿ ಇದರಲ್ಲಿ ಕೈವಾಡ ಇದ್ದರೆ ಅಂತಹ ಸಂಸ್ಥೆ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss