Saturday, July 2, 2022

Latest Posts

ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ: ಶಿವಣ್ಣ

ಮಂಡ್ಯ : ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಪ್ರತಿಯೊಬ್ಬರೂ ಸ್ಮರಿಸುವುದು ಸಹಜ. ಅವರ ಆಡಳಿತ, ಅಭಿವೃದ್ಧಿಯ ದೃಷ್ಟಿ, ಕೃಷಿಗೆ ನೀಡಿದ ಮಹತ್ವ ಸ್ಮರಣೀಯ ಎಂದು ಬಿಜೆಪಿ ಮುಖಂಡ ಚಂದಗಾಲು ಎನ್. ಶಿವಣ್ಣ ತಿಳಿಸಿದರು.
ಬಿಜೆಪಿ ವತಿಯಿಂದ ನಗರದ ಮಹಾವೀರ ವೃತ್ತದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಅವರು, ಕೇವಲ ಕೆಂಪೇಗೌಡರ ಜಯಂತಿ ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಅವರ ಆದರ್ಶ, ದೂರದೃಷ್ಠಿ, ಜನಪರ ಯೋಜನೆಗಳ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅಗತ್ಯ ಎಂದು ಹೇಳಿದರು.
ಕೆಂಪೇಗೌಡರ ದಾರ್ಶನಿಕತೆ, ಅವರ ಅಭಿವೃದ್ಧಿಶೀಲತೆ ಯಾರೂ ಮರೆಯವಂತಿಲ್ಲ. ಐದು ಶತಮಾನಗಳೇ ಆಗಿಹೋದ ಮೇಲೆಯೂ ಅವರ ಅಭಿವೃದ್ಧಿಯ ಕುರುಹು ಗಳು ಅಚ್ಚಳಿಯದೇ ಉಳಿದಿವೆ ಎಂದರೆ ಎಂತಹ ದೂರದೃಷ್ಠಿ ಉಳ್ಳವರಾಗಿದ್ದರು ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss