ಹೊಸದಿಗಂತ ಆನ್ಲೈನ್ ಡೆಸ್ಕ್:
2.25 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ,ಹರ್ಯಾಣಾದಿಂದ ಕರ್ನಾಟಕಕ್ಕೆ ಬಂದು ಸರಣಿ ಕಳ್ಳತನ ಮಾಡಿ ಓಡಿಹೋಗುತ್ತಿದ್ದ ಕಳ್ಳರು ಇದೀಗ ಬೆಂಗಳೂರು ಪೊಲೀಸರ ಅತಿಥಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ 2.25 ಕೋಟಿ ಮೌಲ್ಯದ ನಾಲ್ಕು ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಫಯೂಮ್ ಹಾಗೂ ಮುರಸಲೀಂ ಬಂಧಿತರು. ಫಯೂಮ್ ಕಳ್ಳತನ ಜೊತೆಗೆ ಎಟಿಎಂ ಕೂಡ ರಾಬೆರಿ ಮಾಡುತ್ತಿದ್ದ ಎನ್ನಲಾಗಿದೆ. ಈಗಾಗಲೇ ಒಂದು ಬಾರಿ ಜೈಲಿನಲ್ಲಿದ್ದ ಫಯೂಮ್ ಜೈಲಿನಿಂದ ಹೊರಬಂದಮೇಲೆ ಕರ್ನಾಟಕದಲ್ಲಿ ಕಳ್ಳತನ ಆರಂಭಿಸಿದ್ದ. ಫಿಂಗರ್ ಪ್ರಿಂಟ್ನಿಂದ ಆರೋಪಿಯ ಗುರುತನ್ನು ಪತ್ತೆಹಚ್ಚಲಾಗಿದೆ.