ಬೆಂಗಳೂರು: ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಒಂದು ವಾರ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಈ ಅವಧಿಯಲ್ಲಿ ಅನಗತ್ಯವಾಗಿ ಓಡಾಡುವವರ ಗಾಡಿ ಸೀಜ್ ಆಗಲಿದೆ.
ಕಾರಣವಿಲ್ಲದೆ ಗಾಡಿಯಲ್ಲಿ ಸುತ್ತುವವರ ಗಾಡಿ ಸೀಜ್ ಮಾಡಲಾಗುವುದು, ಅಲ್ಲದೆ ಅದನ್ನು ಲಾಕ್ ಡೌನ್ ಮುಗಿಯುವವರೆಗೂ ಅವರಿಗೆ ಕೊಡುವುದಿಲ್ಲ. ಕೇವಲ ಅಗತ್ಯ ವಸ್ತುಪೂರೈಕೆ, ತುರ್ತು ಸೇವೆಗೆ ಮಾತ್ರ ಮನೆಯಿಂದ ಹೊರಬರಬೇಕಿದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್ ಆಗಲಿದೆ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಸಿದ್ದಾರೆ.