Tuesday, July 5, 2022

Latest Posts

ಬೆಂಗಳೂರು ವಿಮಾನ ನಿಲ್ದಾಣ| ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ!

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಿಸಲು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಚರ್ಚೆ ನಡೆಸಿದೆ.

ಜೂನ್ 27 ರಂದು ಕೆಂಪೇಗೌಡರ 511 ನೇ ಜಯಂತಿ ಹಿನ್ನಲೆ ಅಂದು ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಗುಜರಾತ್ ನಲ್ಲಿರುವ 597 ಅಡಿ ಎತ್ತರದ ವಿಶ್ವದ ಅತಿ ದೊಡ್ಡದ ಏಕತೆಯ ಪ್ರತಿಮೆ ನಿರ್ಮಿಸಿದ ರಾಮ್ ವಿ ಸುತಾರ್ ಮತ್ತು ಅನಿಲ್ ಆರ್ ಸುತಾರ್ ಅವರಿಗೆ ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಗುತ್ತಿಗೆ ನೀಡಲಾಗುತ್ತದೆ. ರಾಮ್ ವಿ ಸುತಾರ್ ಅವರು ವಿಧಾನ ಸೌಧ ಹಾಗೂ ವಿಕಾಸ್ ಸೌಧ ನಡುವೆ ಇರುವ ಗಾಂಧಿ ಪ್ರತಿಮೆ ನಿರ್ಮಿಸಿದ್ದರು.

ಪ್ರತಿಮೆ ನಿರ್ಮಾಣಕ್ಕೆ ಅಂದಾಜು 66 ಕೋಟಿ ರೂ ವೆಚ್ಚವಾಗಲಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ.

ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23 ಎಕರೆ ಭೂಮಿ ಗುರುತಿಸಲಾಗಿದ್ದು, ಪ್ರತಿಮೆ ಸುತ್ತಲಿನ ಪ್ರದೇಶವನ್ನು ಅಭಿವೃದ್ಧಿಗೊಳಿಸಲು 80 ಕೋಟಿ ರೂ ಬೇಕಾಗಿದೆ.

ರಾಮನಗರದ ಮಾಗಡಿ ತಾಲೂಕಿನ ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿ ನಿರ್ಮಾಣಕ್ಕೆ ಸರ್ಕಾರ ಶ್ರಮಿಸುತ್ತಿದ್ದು, ಅದಕ್ಕೆ 41 ಕೋಟಿ ರೂ ನಿಗದಿಪಡಿಸಲಾಗಿದೆ. ಈ ನಡುವೆ ಅಲ್ಲಿರುವ ಕೆರೆಗಳ ಅಭಿವೃದ್ದಿಯೂ ನಡೆಯಲಿದ್ದು, ಅದಕ್ಕೆ 17 ಕೋಟಿ ರೂ ಅಂದಾಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss