Saturday, August 13, 2022

Latest Posts

ಬೆಂಗಳೂರು: ಹಬ್ಬಗಳ ಆಚರಣೆ ಕುರಿತಾಗಿ ಬಿಬಿಎಂಪಿ ಮಾರ್ಗಸೂಚಿ‌ ಬಿಡುಗಡೆ

ಬೆಂಗಳೂರು: ಒಂದೆಡೆ ಕೊರೋನಾ ಆರ್ಭಟ. ಇನ್ನೊಂದೆಡೆ ಸಾಲು ಸಾಲು ಹಬ್ಬ ಆಚರಣೆ. ಜನ ಹೆದರುತ್ತಲೇ ಹಬ್ಬಗಳ‌ಆಚರಣೆ ಮಾಡುತ್ತಾರೆ. ಹಾಗಾಗಿ ನರಗದ ಜನತೆಯ ಹಿತದೃಷ್ಟಿಯಿಂದ ಹಬ್ಬಗಳ ಆಚರಣೆಗೆ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಹಬ್ಬಗಳ ಸಂದರ್ಭದಲ್ಲಿ ದೇವಾಲಯ, ಚರ್ಚ್, ಮಸೀದಿ ಮುಂತಾದ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಬೇಡಿ.
ಸ್ನೇಹಿತರು, ಸಂಬಂಧಿಕರು, ಅಕ್ಕ-ಪಕ್ಕದ ಮನೆಗಳಿಗೆ ಹೋಗಬೇಡಿ. ಮನೆಯಲ್ಲಿಯೇ ಸರಳವಾಗಿ ಆಚರಿಸಿ.
ಗೌರಿ-ಗಣೇಶ ಹಬ್ಬಕ್ಕೆ ಮೂರ್ತಿಗಳನ್ನು ಹೊರಗಿನಿಂದ ತರುವುದು ಅಪಾಯಕಾರಿ
ಸಾರ್ವಜನಿಕವಾಗಿ ನಡೆಯುವ ವಿಸರ್ಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ. ಬಕ್ರೀದ್, ಕೃಷ್ಣಾಷ್ಟಮಿ ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ಮಾಡಬೇಡಿ.

ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಬೇಡಿ ತರವಲ್ಲ. ರಕ್ಷಾಬಂಧನದ ದಿನ ಅಣ್ಣ ಅಥವಾ ತಂಗಿಯ ಮನೆಗೆ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss