Wednesday, August 17, 2022

Latest Posts

ಬೆಚ್ಚಿಬೀಳಿಸಿದವು ಮನೆ ಪಕ್ಕದ ಪೊದೆಯಲ್ಲಿದ್ದ ಎರಡು ದೊಡ್ಡ ಗಾತ್ರದ ನಾಗರಹಾವು, 10ಕ್ಕೂ ಹೆಚ್ಚು ಮರಿಗಳು!!

ಮಂಡ್ಯ: ಮನೆಯ ಪಕ್ಕದಲ್ಲಿರುವ ಪೊದೆಯಲ್ಲಿದ್ದ ಎರಡು ದೊಡ್ಡ ಗಾತ್ರದ ನಾಗರಹಾವು ಹಾಗೂ 10ಕ್ಕೂ ಹೆಚ್ಚು ಮರಿಗಳು ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿವೆ.
ರಾಚಿ ಮತ್ತು ಸಿದ್ದಪ್ಪಾಜಿ ಸಹೋದರರ ಮನೆಯ ಬಳಿ ಪತ್ತೆಯಾದ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡಲಾಯಿತು.
ಸಾಮಾಜಿಕ ಹೋರಾಟಗಾರ ಮುದಿಗೆರೆ ಕೃಷ್ಣೇಗೌಡ ಅವರಿಂದ ವಿಷಯ ತಿಳಿದು ಮದ್ದೂರಿನ ಸ್ನೇಕ್ ಯೋಗಿ ಜತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಕ ರಾಘವೇಂದ್ರ ಅವರು ಹಾವುಗಳು ಮತ್ತು ಮರಿಗಳನ್ನು ಹಿಡಿದು ಗ್ರಾಮಸ್ಥರ ಆತಂಕವನ್ನು ನಿವಾರಿಸಿದರು.
ವಶಕ್ಕೆ ಪಡೆದಿರುವ ಹಾವುಗಳನ್ನು ವಲಯ ಅರಣ್ಯ ಸಂರಕ್ಷಣಾಧಿಕಾರಿ ರತ್ನಾಕರ್ ಅವರ ನಿರ್ದೇಶನದಂತೆ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು.
ಸಾರ್ವಜನಿಕರು ಹಾವುಗಳನ್ನು ಕೊಲ್ಲಬಾರದು. ವಿಷಯ ತಿಳಿಸಿದರೆ ನಾವು ಬಂದು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುತ್ತೇವೆ ಎಂದು ಅವರು ಮನವಿ ಮಾಡಿದರು. ಅರಣ್ಯ ಇಲಾಖೆ ವಾಚರ್ ಶಿವರಾಂ, ರೈತಸಂಘದ ಮುಖಂಡ ಗದ್ದೆಲಿಂಗೇಗೌಡ, ಶ್ರೀಧರ್, ಸುಮಂತ ಇತರ ಮುಖಂಡರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!