ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಿಡುಗು ನಿಯಂತ್ರಣಕ್ಕೆ ತರುತಿದ್ದಂತೆಯೇ ಮಹಾಮಾರಿ ಮತ್ತೆ ಆರ್ಭಟ ಹೆಚ್ಚಿಸಿದೆ. ಇಂದು ದಾವಣಗೆರೆ ಒಂದರಲ್ಲೇ 21 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ರಾಜ್ಯದಲ್ಲಿ ಇಂದು 28 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಅದವರಲ್ಲಿ 21 ಪ್ರಕರಣಗಳು ದಾವಣಗೆರೆಯಲ್ಲಿಯೇ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಚಿಕ್ಕಬಳ್ಳಾಪುರ 1, ಮಂಡ್ಯ 2, ಹಾವೇರಿ 1, ವಿಜಯಪುರ 1, ಕಲಬುರಗಿ 2 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 304 ಮಂದಿ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, 26 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದಾವಣಗೆರೆಯ ಹೊಸ ಸೋಂಕಿತರಾದ ಪಿ.615, ಪಿ.616, ಪಿ.617, ಪಿ.618, ಪಿ.619, ಪಿ.620, ಪಿ.621, ಪಿ.622,ಪಿ.625,ಪಿ.626 ಎಲ್ಲರೂ ಕೊರೋನಾ ಸೋಂಕಿತ ವ್ಯಕ್ತಿ ಪಿ.533 ಸಂಪರ್ಕದಲ್ಲಿದ್ದವರೆಂದು ತಿಲಿದು ಬಂದಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.