ತುಂಬಾ ಜನರಿಗೆ ಚಹಾ ಜೀವನದ ಸಂಗಾತಿಯಿದ್ದಂತೆಯೇ. ಒಂದು ದಿನ ಚಹಾ ಕುಡಿಯದಿದ್ದರೂ ಏನನ್ನೋ ಕಳೆದುಕೊಂಡಂತೆ ಅನಿಸುತ್ತದೆ. ನಿಮಗೆ ಗೊತ್ತಿರಲಿ: ಅತಿಯಾಗಿ ಚಹ ಕುಡಿಯುವುದೂ ಒಂದು ಚಟ. ನಿಮ್ಮಿಂದ ಚಹಾ ಕುಡಿಯುವುದನ್ನು ಕಂಟ್ರೋಲ್ ಮಾಡಲಾಗುತ್ತಿಲ್ಲ ಎನ್ನುವುದಾದರೆ ಬೆಲ್ಲದ ಚಹಾ ಕುಡಿಯುವುದನ್ನು ರೂಢಿಸಿಕೊಳ್ಳಿ. ಬೆಲ್ಲದ ಚಹಾ ದೇಹಕ್ಕೆ ಒಳ್ಳೆಯದು. ಇದನ್ನೂ ಸಕ್ಕರೆ ಕಾಯಿಲೆ ಇರುವವರೂ ಸಹ ಕುಡಿಯಬಹುದು. ಹೇಗೆ ಬೆಲ್ಲದ ಚಹಾ ತಯಾರಿಸುವುದು ಇಲ್ಲಿದೆ ಮಾಹಿತಿ.
ಬೇಕಾಗುವ ಪದಾರ್ಥ:
ಬೆಲ್ಲ
ಟೀ ಪುಡಿ
ಶುಂಠಿ
ಹಾಲು
ನೀರು
ಏಲಕ್ಕಿ
ಮಾಡುವ ವಿಧಾನ:
ಮೊದಲಿಗೆ ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ. ಅದನ್ನು ಕುದಿಸಿ. ನಂತರ ನೀರು ಕುದಿಯುವಾಗ ಶುಂಠಿ ಸಣ್ಣ ತುಂಡು ಜಜ್ಜಿ ಹಾಕಿ, ಆಮೇಲೆ ಏಲಕ್ಕಿ ಪುಡಿ ಚಿಟಿಕೆ, ಸಿಹಿ ಬೇಕಾಗುವಷ್ಟು ಬೆಲ್ಲ, ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಅರ್ಧ ಕಪ್ ಹಾಲು ಹಾಕಿ 5 ನಿಮಿಷ ಬಿಟ್ಟು ಸೋಸಿಕೊಂಡು ಕುಡಿಯಿರಿ.
ಬೆಲ್ಲದ ಚಹಾದ ಆರೋಗ್ಯಕರ ಉಪಯೋಗ:
- ಸಕ್ಕರೆ ಚಹಾ ಬದಲು ಬೆಲ್ಲದ ಚಹಾ ಕುಡಿದರೆ ನಮ್ಮ ದೇಹದ ಜೀರ್ಣಕಾರಿ ಕಿಣ್ವಗಳು ಸಕ್ರಿಯಗೊಳ್ಳುತ್ತದೆ.
- ರಕ್ತ ಹೀನತೆ ಸಮಸ್ಯೆ ಇರುವವರು ಬೆಲ್ಲದ ಚಹಾ ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
- ಆಗಾಗ ಜ್ವರ ಬರುವವರು ಈ ಬೆಲ್ಲದ ಚಹಾ ಸೇವಿಸಿದರೆ ಜ್ವರ ಬರುವುದಿಲ್ಲ.
- ಬೆಲ್ಲದ ಚಹಾ ಸೇವನೆ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.
- ಮುಟ್ಟಿನ ದಿನಗಳಲ್ಲಿ ಬರುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ.