ಕಾಫಿಯಿಂದ ಹಿಡಿದು ಎಲ್ಲಾ ಸಿಹಿ ತಿಂಡಿಗಳಿಗೂ ಸಕ್ಕರೆಯೇ ಬೇಕು. ಆದರೆ ಸಕ್ಕರೆ ತಿನ್ನುವುದರಿಂದ ಅನಾನುಕೂಲ ಇದೆ. ಆದರೆ ಬೆಲ್ಲದಲ್ಲಿ ಇರುವ ಗುಣಗಳನ್ನು ಕೇಳಿದರೆ ಇಷ್ಟು ದಿನ ಏಕೆ ಬೆಲ್ಲ ಬಳಸಿಲ್ಲ ಎಂದುಕೊಳ್ಳುತ್ತೀರಿ.. ಬೆಲ್ಲದ ಒಳ್ಳೆ ಗುಣಗಳ ಬಗ್ಗೆ ತಿಳಿಯೋಣ ಬನ್ನಿ..
- ಮಲಬದ್ಧತೆ ದೂರ: ಬೆಲ್ಲ ಆಹಾರದಲ್ಲಿ ಬಳಸುವುದರಿಂದ ಹೊಟ್ಟೆಯೊಳಗೆ ಜೀರ್ಣಕ್ರಿಯೆ ನಡೆಸುವ ಎನ್ಜೈಮ್ಸ್ಗಳ ಜೊತೆ ಸೇರಿ ವಿಸರ್ಜನೆಗೆ ಸಹಾಯ ಮಾಡುತ್ತದೆ.
- ಲಿವರ್ನ ಆರೋಗ್ಯ: ಲಿವರ್ನಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಿ ಲಿವರ್ ಆರೋಗ್ಯವಾಗಿರುವಂತೆ ಮಾಡುತ್ತದೆ.
- ಶೀತ,ಕೆಮ್ಮಿಗೆ ರಾಮಬಾಣ: ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಶೀತ, ಕೆಮ್ಮು ದೂರವಾಗುತ್ತದೆ.
- ರಕ್ತ ಶುದ್ಧೀಕರಣ: ರಕ್ತ ಶುದ್ಧೀಕರಣದಲ್ಲಿ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಶುದ್ಧಿಯಾಗಿದ್ದರೆ ಆರೋಗ್ಯ ಚೆನ್ನಾಗಿ ಇರುತ್ತದೆ.
- ರೋಗನಿರೋಧಕ ಶಕ್ತಿ: ದೇಹದಲ್ಲಿ ಬೇರೆ ವೈರಾಣುಗಳ ವಿರುದ್ಧ ಹೋರಾಡಲು ಬೆಲ್ಲ ಸಹಕರಿಸುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್ಸ್ ಮಿನರಲ್ಸ್ ಹಾಗೂ ಝಿಂಕ್ ಇದೆ.
- ಪಿರಿಯಡ್ ಹೊಟ್ಟೆನೋವು: ಹೆಣ್ಣುಮಕ್ಕಳಿಗೆ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆನೋವು ಬರುತ್ತದೆ. ಇದಕ್ಕಾಗಿ ಮಾತ್ರೆಯ ಮೊರೆ ಹೋಗುವ ಬದಲು ಒಂದು ಪೀಸ್ ಬೆಲ್ಲ ತಿನ್ನಿ. ನೋವು ಸ್ವಲ್ಪ ಕಡಿಮೆಯಾಗುತ್ತದೆ.
- ಹೀಟ್ ಕಡಿಮೆ ಮಾಡುತ್ತದೆ: ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ ಬೆಲ್ಲ ತಿನ್ನಬಹುದು. ಬೆಲ್ಲ ದೇಹದಲ್ಲಿ ಉಷ್ಣಾಂಶ ಒಂದೇ ಸಮನೆ ಇರಲು ಸಹಕರಿಸುತ್ತದೆ.
- ಉಸಿರಾಟ ಸರಾಗ: ಉಸಿರಾಟದ ತೊಂದರೆ ಇರುವವರು ಬೆಲ್ಲ ತಿನ್ನಿ. ಅಸ್ಥಮಾ,ಬ್ರೋಂಕೈಟಿಸ್ಗಳಿಗೆ ರಾಮಬಾಣವಾಗಿದೆ.