ಬೆಲ್ಲ ಎಂದರೆ ನೆನಪಾಗೋದೇ ವಿವಿಧ ರೀತಿಯ ಸಿಹಿ ತಿನಿಸುಗಳು. ಸಕ್ಕರೆ ಬದಲಿಗೆ ಬಳಸುವ ಬೆಲ್ಲದಲ್ಲಿ ಅನೇಕ ಆರೋಗ್ಯಕರ ಗುಣಗಳು ಸೇರಿದಂತೆ ಸೌಂದರ್ಯ ವೃದ್ಧಿಗೆ ಬೆಲ್ಲ ಪರಿಣಾಮಕಾರಿ..ಹಾಗಿದ್ದರೆ ಬನ್ನಿ ಸೌಂದರ್ಯ ವರ್ಧಕ ಬೆಲ್ಲದ ಪ್ರಯೋಜನಗಳನ್ನು ತಿಳಿಯೋಣ:
ಸುಕ್ಕಿಗೆ ನಿವಾರಣೆಗೆ: ಬೆಲ್ಲದಲ್ಲಿರುವ ಗ್ಲೈಕೊಲಿಕ್ ಆಮ್ಲ ಅಂಶವು ಮುಖದಲ್ಲಿರುವ ಸುಕ್ಕುಗಳನ್ನು ಹೋಗಲಾಡಿಸುತ್ತದೆ.
ಚರ್ಮಕ್ಕೆ ಕಾಂತಿ: ಜೇನು ತುಪ್ಪ, ನಿಮಬೆ ರಸ, ಬೆಲ್ಲ ಪುಡಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ತೊಳೆಯುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.
ಮೊಡವೆ: ಮುಖದ ಮೇಲೆ ಕಲೆಯಾಗಿ ಸೌಂದರ್ಯಕ್ಕೆ ಕುಂದು ತರುವ ಮೊಡವೆಗಳನ್ನು ಬೆಲ್ಲದೂರ ಮಾಡುತ್ತದೆ.