Tuesday, July 5, 2022

Latest Posts

ಬೆಳಗಾವಿಗೆ ಬಂದಿಳಿದ್ರು15 ಮಂದಿ ವಿದೇಶಿಗರು: ಹೈಬ್ರೀಡ್ ಕೊರೋನಾ ಕನ್ಫರ್ಮ್?

ಹೊಸದಿಗಂತ ವರದಿ,ಬೆಳಗಾವಿ:

ಲಂಡನ್ ನಿಂದ ಬೆಳಗಾವಿ ಜಿಲ್ಲೆಗೆ 15 ಜನ ಅಗಮಿಸಿದ್ದು, ಈ 15 ಜನರ ಪೈಕಿ 10 ಜನ ಬೆಳಗಾವಿ ಮಹಾನಗರದಲ್ಲಿದ್ದು ಉಳಿದ ಐದು ಜನ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯ ಬೆಳಗಾವಿ ತಾಲ್ಲೂಕಿನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂಗ್ಲೆಂಡ್ ದಿಂದ ಬೆಳಗಾವಿಗೆ ಬಂದಿರುವ ಹದಿನೈದು ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಹದಿನೈದು ಜನರ ರಿಪೋರ್ಟ್ ನೆಗೆಟೀವ್ ಬಂದಿದೆ. ಆರೋಗ್ಯ ಇಲಾಖೆಯಿಂದ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದೇವೆ ಕೋವೀಡ್ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಿದ್ದೇವೆ ಎಂದು ಡಿಸಿ ಹೇಳಿದರು.

ಕೊರೋನಾ ಕಡಿಮೆ ಇದೆ ಅಂತಾ ಜನ ನಿಶ್ಕಾಳಜಿ ಮಾಡಬಾರದು,ಸಾಮಾಜಿಕ ಅಂತರ ಕಾಯ್ದುಕೊಂಡು ,ಮಾಸ್ಕ ಹಾಕಿಕೊಂಡು ಕೋವೀಡ್ ನಿಯಮಾವಳಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss