Thursday, June 30, 2022

Latest Posts

ಬೆಳಗಾವಿ: ಒಂದೇ ದಿನದಲ್ಲಿ ಹದಿನೇಳು ಜನರಿಗೆ ಮಹಾಮಾರಿ ಕರೋನಾ ಸೋಂಕು

ಬೆಳಗಾವಿ: ಜಿಲ್ಲೆಯನ್ನು ಬಿಚ್ಚಿ ಬಿಳಿಸಿದ ಮಹಾಮಾರಿ ಕರೋನಾ ಸೋಂಕು. ಗುರುವಾರ ಒಂದೇ ದಿನದಲ್ಲಿ ಹದಿನೇಳು ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಗಡಿ ಜಿಲ್ಲೆಯಲ್ಲಿ ರಣಕೇಕೆ ಹಾಕುತ್ತಿರುವ ಕೋರೊನಾ ಸೋಂಕು ಜನರಲ್ಲಿ ಭೀತಿ ಹುಟ್ಟಿಸುವ ರೀತಿಯಲ್ಲಿ ಸಾಗುತ್ತಿದೆ. ಕೊರೋನಾ ವೈರಸ್ ಹಾಟ್ ಸ್ಪಾಟ್ ಆಗಿ ಗಡಿನಾಡು ಜಿಲ್ಲೆ ಬೆಳಗಾವಿ ಮಾರ್ಪಟ್ಟಿದೆ.
ಒಂದೇ ದಿನ ಬೆಳಗಾವಿಯ 17  ಕೇಸ್ ಪತ್ತೆಗೆ ಬೆಚ್ಚಿಬಿದ್ದ ಜನತೆ ಈಗ ಮುಂದೇನು? ಎಂದು ಆತಂಕ ಪಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಗುರುವಾರ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ 8, ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದಲ್ಲಿ 7, ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ 1 ಹಾಗೂ ಬೆಳಗಾವಿ ನಗರದ ಯಳ್ಳೂರದಲ್ಲಿ 1 ಸೋಂಕು ತಗುಲಿದ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಸಂಕೇಶ್ವರದಲ್ಲಿ ಒಂದು ಹೊಸದಾಗಿ ಪ್ರಕರಣ ಪತ್ತೆಯಾಗಿದೆ‌.
ಇವರೆಲ್ಲ ದೆಹಲಿಯ ನಿಜಾಮುದ್ದೀನ್ ಮರ್ಕತ್ ಧರ್ಮ ಸಭೆಗೆ ಹಾಜರಾಗಿ ಹಿಂದಿರುಗಿದವರ ಜೊತೆ ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ.
ರಾಯಬಾಗದಲ್ಲಿ ಪತ್ತೆಯಾದವರಲ್ಲಿ ಒಬ್ಬ ಗೋವಾ, ಒಬ್ಬ ವಿಜಯಪುರ, ಒಬ್ಬ ಮೀರಜ್ ಮೂಲದವರಾಗಿದ್ದಾರೆ. ಗುರುವಾರ ಪತ್ತೆಯಾಗಿರುವ ಪ್ರಕರಣಗಳಲ್ಲಿ ಹಿರೇಬಾಗೇವಾಡಿಯ 8 ಸೋಂಕಿತರಲ್ಲಿ 6 ಜನ ಮಹಿಳೆಯರಾಗಿದ್ದಾರೆ.
ಪಿ-225 ಯಿಂದ 282, 284 ಗೆ ಸಂಪರ್ಕ, ಪಿ-224 ಯಿಂದ 283, 285 ರಿಂದ 289 ಗೆ ಸಂಪರ್ಕ, ಪಿ-293 ಯಿಂದ 301 ಸೋಂಕು ಹರಡಿದೆ ಎಂದು ಹೇಳಲಾಗಿದೆ. ಸಂಕೇಶ್ವರ ಪಟ್ಟಣ ಹಾಗೂ ಯಳ್ಳೂರದಲ್ಲಿ ಸಿಲ್ ಡೌನ್ ಮಾಡಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss