Monday, July 4, 2022

Latest Posts

ಬೆಳಗಾವಿ| ಕೊರೋನಾ ಪಾಸಿಟಿವ್ ವ್ಯಕ್ತಿಯ ಮನೆಯಲ್ಲಿ ಕಳ್ಳತನ

ಬೆಳಗಾವಿ: ಕೊರೋನಾ ಪಾಸಿಟಿವ್ ವ್ಯಕ್ತಿಯ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಭಾನುವಾರ ಕೊರೋನಾ ಪಾಸಿಟಿವ್ ಸೊಂಕು ದೃಢವಾವ ವ್ಯಕ್ತಿಯ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದು ನೇಸರಗಿ ಗ್ರಾಮದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ. ಗ್ರಾಮಕ್ಕೆ ಮತ್ತು ಸೊಂಕಿತ ವ್ಯಕ್ತಿಯ ಕುಟುಂಕ್ಕೆ ತೀವ್ರ ಆಘಾತ ಎದುರಾಗಿದೆ.
ಭಾನುವಾರ ೫೨ ವರ್ಷದ ವ್ಯಕ್ತಿಗೆ ಸೊಂಕು ಬಂದ ಪರಿಣಾಮ ಆತನ ಪತ್ನಿ, ಮಗಳನ್ನು ಕ್ವಾರಂಟೈನ ಮಾಡಲಾಗಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಲಾಕ್ ಆದ ಮನೆಯಲ್ಲಿ ಕಳ್ಳರು ಕಳ್ಳತನ ಮಾಡಿದ ಪ್ರಸಂಗ ನಡೆದಿದೆ. ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss