Monday, July 4, 2022

Latest Posts

ಬೆಳಗಾವಿ| ಕೋವಿಡ್-19: ಕಾರ ಹುಣ್ಣಿಮೆ ಆಚರಣೆಗೆ ಕರಿ ಛಾಯೆ

ಬೆಳಗಾವಿ: ಜಗತ್ತನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಎನ್ನುವ ಸೋಂಕು, ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಜಿಲ್ಲೆಯಲ್ಲಿ ಆಚರಿಸುವ ಕಾರ ಹುಣ್ಣಿಮೆ ಕರಿ ಛಾಯೆ ಬೀರಿದೆ.

ಭೂಮಿ ಹುಣ್ಣಿಮೆ ಎಂದು ಕರೆಯುವ ಈ ಹುಣ್ಣಿಮೆಗೆ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷತೆವಿದೆ. ಕೃಷಿಕರು ಈ ಹುಣ್ಣಿಮೆಯನ್ನು ತನ್ನ ಸಂಗಾತಿ ಎತ್ತುಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.

ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ ಮುಂಗಾರು ಬಿತ್ತನೆಯ ಸಮಯದಲ್ಲಿ ರೈತ ಸಮುದಾಯ ತನ್ನ ಜೀವಾಳುಗಳಾದ ಎತ್ತುಗಳನ್ನು ಬಣ್ಣ, ಬಣ್ಣಗಳಿಂದ ಶೃಂಗಾರ ಮಾಡಿ ಮುಳ್ಳಿನ ಬನ್ನಿಯ ಮೇಲೆ ಹಾಯಿಸಿಕೊಂಡು ಹೋಗುವ ಕೃಷಿಕರ ಸುಗ್ಗಿ ಹಬ್ಬ ಕಾರ ಹುಣ್ಣಿಮೆಯಾಗಿದೆ.

ಹುಣ್ಣಿಮೆಯ ದಿನ ಎತ್ತುಗಳ ಮೈ ತೊಳೆದು ಬಣ್ಣ, ಬಣ್ಣಗಳಿಂದ ಶೃಂಗಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ, ಹೋಳಿಗೆ, ಕಡುಬು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಜೀವ ಇರುವ ಬಸವಣ್ಣ ಎಂದು ಅವುಗಳಿಗೆ ತಿನ್ನಿಸುತ್ತಾರೆ. ಶೃಂಗಾರಗೊಂಡ ಎತ್ತುಗಳನ್ನು ಗ್ರಾಮಗಳ ತುಂಬೆಲ್ಲ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಸುತ್ತಾರೆ. ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಗೌಡರ ಎತ್ತುಗಳು, ಸರ್ಕಾರದ ಎತ್ತುಗಳನ್ನು ಬನ್ನಿ ಹಾಯಿಸುವ ಮೂಲಕ ರೈತರು ಕಾರ ಹುಣ್ಣಿಮೆಯನ್ನು ಆಚರಣೆ ಮಾಡುತ್ತಾರೆ.

ಆದರೆ, ಕೊರೋನಾ ಎನ್ನುವ ಮಹಾಮಾರಿ ರೈತ ಸಮುದಾಯ ಇಂದು ಆಚರಣೆ ಮಾಡುತ್ತಿದ್ದ ಭೂಮಿ (ಕಾರ ಹುಣ್ಣಿಮೆ) ಮೇಲೆ ಪ್ರಭಾವ ಬೀರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss