Saturday, August 13, 2022

Latest Posts

ಬೆಳಗಾವಿ| ಗಾಂಜಾ ಮಾರಾಟ ಜಾಲ ಪತ್ತೆ, ಬರೋಬ್ಬರಿ 15 ಕೆ.ಜಿ. 500 ಗ್ರಾಂ ಗಾಂಜಾ ವಶಕ್ಕೆ

ಬೆಳಗಾವಿ: ಬೆಳಗಾವಿಯ ಕ್ರೈಂ ಬ್ರ್ಯಾಂಚಿನ ಪೋಲೀಸರು ಶುಕ್ರವಾರ ಭರ್ಜರಿ ಬೇಟೆಯಾಡಿದ್ದಾರೆ, ಬೆಳಗಾವಿ ಮಹಾನಗರದಲ್ಲಿ ಗಾಂಜಾ ಮಾರಾಟದ ಜಾಲವನ್ನು ಪತ್ತೆ ಮಾಡಿ ಬರೊಬ್ಬರಿ 15 ಕೆ.ಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಹಾನಗರದ ಹೃದಯ ಭಾಗ
ಬೆಳಗಾವಿಯ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ,ಮಲ್ಲಪ್ಪ ಸಿದ್ರಾಮಣಿ ನಿಪ್ಪಾಣಿ ಸಾ! ನಾಗರಮುನ್ನೋಳಿ, ಹಾಲಿ ಮುಗುಳಖೋಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ,ಈತನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ,ಕಲ್ಬುರ್ಗಿ ಜಿಲ್ಲೆಯ ಇಬ್ಬರನ್ನು ಬಂಧಿಸಿ ಒಟ್ಟು ಎರಡುವರೆ ಲಕ್ಷ ರೂ. ಕಿಮ್ಮತ್ತಿನ 15 ಕೆ.ಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಐಬಿ ಎಸಿಪಿ ನಾರಾಯಣ ಭರಮಣಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂಜೀವ ಕಾಂಬಳೆ ಅವರು ಕಾರ್ಯಾಚರಣೆ ನಡೆಸಿದ್ದರು. ಸಿಸಿಐಬಿ ಸಿಬ್ಬಂದಿಗಳ ಕಾರ್ಯವನ್ನು
ನಗರ ಪೊಲೀಸ್ ಆಯುಕ್ತ ಕೆ‌. ತ್ಯಾಗರಾಜನ್, ಡಿಸಿಪಿ ವಿಕ್ರಮ ಅವರು ಅಭಿನಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss