Saturday, August 13, 2022

Latest Posts

ಬೆಳಗಾವಿ| ಗೋಮಾಂಸ ಸಾಗಾಟ ಮಾಡುತ್ತಿದ್ದ ನಾಲ್ಕು ವಾಹನಗಳು ಪೋಲೀಸರ ವಶಕ್ಕೆ

ಬೆಳಗಾವಿ: ಜಿಲ್ಲೆಯಿಂದ ಪಕ್ಕದ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಾಟ ಅವ್ಯಾಹತವಾಗಿ ನಡೆದಿದೆ.ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆ ವ್ಯಾಪ್ತಿಯ ಕರ್ಲೇ ಗ್ರಾಮದ ಬಳಿ ಗೋಮೌಂಸ ತುಂಬಿದ ವಾಹನಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ, ಹಿರೇಬಾಗೇವಾಡಿ ಗ್ರಾಮದ ಬಳಿ ಮತ್ತೆ ನಾಲ್ಕು ವಾಹನಗಳು ಸಿಕ್ಕಿಬಿದ್ದಿವೆ.

ಗೋಮೌಂಸ ತುಂಬಿಕೊಂಡು ಬರುತ್ತಿದ್ದ ನಾಲ್ಕು ವಾಹನಗಳನ್ನು ಹಿರೇಬಾಗೇವಾಡಿ ಗ್ರಾಮದ ಟೋಲ್ ಬಳಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ಕು ವಾಹನಗಳನ್ನು ವಶಕ್ಕೆ ಪಡೆದಿರುವ ಪೋಲೀಸರು, ನಾಲ್ಕು ವಾಹನಗಳ ಚಾಲಕರನ್ನು ವಿಚಾರಣೆಗೊಳಪಡಿಸಿದ್ದಾರೆ. ಆಕ್ರಮವಾಗಿ ಗೋಮೌಂಸ ಸಾಗಿಸುತ್ತಿದ್ದ ನಾಲ್ಕು ವಾಹನಗಳು ಪೋಲೀಸರ ವಶದಲ್ಲಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಹಿರೇಬಾಗೇವಾಡಿ ಠಾಣೆಯಲ್ಲಿ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss