Wednesday, June 29, 2022

Latest Posts

ಬೆಳಗಾವಿ|ಮಾರಿಹಾಳ ಗ್ರಾ.ಪಂ.ಗೆ ಅವಿರೋಧ ಆಯ್ಕೆಯಾದ ಸದಸ್ಯರನ್ನು ಭೇಟಿ ಮಾಡಿದ ರಮೇಶ ಜಾರಕಿಹೊಳಿ

ಹೊಸ ದಿಗಂತ ವರದಿ ಬೆಳಗಾವಿ:

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಅವರು ಸದ್ದಿಲ್ಲದೇ ಮತ್ತೊಂದು ಆಪರೇಷನ್ ಮಾಡಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮ ಪಂಚಾಯತಿಯ ಐವರು ಸದಸ್ಯರನ್ನು ಅವಿರೋಧ ವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ,ಉಚಗಾಂವ, ಬೆಳಗುಂದಿ,ತುರಮರಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ತಮ್ಮ ಬಿಗಿಹಿಡಿತ ಹೊಂದಿರುವ ಸಚಿವ ರಮೇಶ ಜಾರಕಿಹೊಳಿ‌ ಅವರನ್ನು ಗುರುವಾರ ಮಾರಿಹಾಳ ಗ್ರಾಮ ಪಂಚಾಯತ್ ಗೆ ಅವಿರೋಧವಾಗಿ ಆಯ್ಕೆಯಾದ ಬಸವರಾಜ ಮಾದಮ್ಮನವರ, ಮಲ್ಲವ್ವ ಕುಳ್ಳನ್ನವರ, ರೇಖಾ ತಳವಾರ, ಗಂಗವ್ವಅಮಾತಿ ಹಾಗೂ ತೌಸೀಫ ಫಣಿಬಂಧ ಅವರು ಭೇಟಿ ಮಾಡಿ ಧನ್ಯವಾದ ಅರ್ಪಿಸಿದರು.

ಪಂಚಾಯತ್ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಅಖಾಡ ಸಿದ್ದಗೊಳಿಸುತ್ತಿರುವ ಸಚಿವ ರಮೇಶ ಜಾರಕಿಹೊಳಿ‌ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss