Wednesday, June 29, 2022

Latest Posts

ಬೆಳಗಾವಿ ಜಿಲ್ಲೆಯಲ್ಲಿ ಕುಂಭದ್ರೋಣ ಮಳೆ: ಮತ್ತೆ ಪ್ರವಾಹದ ಭೀತಿ

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆ, ಬುಧವಾರವು ಸಹ ಮುಂದುವರೆದಿದ್ದು, ಜಿಲ್ಲೆಯಲ್ಲಿ ಸರಿಸುಮಾರು 116.0 ಮಿ.ಮಿ ಮಳೆಯಾಗಿದೆ. ಅತೀ ಹೆಚ್ಚು ಮಳೆ ಸವದತ್ತಿ ತಾಲೂಕಿನಲ್ಲಿದೆ.
ಜಿಲ್ಲೆಯಲ್ಲಿನ ಹಳ್ಳ, ಕೊಳ್ಳಗಳು ತುಂಭಿ ಹರಿಯುತ್ತಿವೆ. ನದಿಗಳು ಸಹ ಅಪಾಯದ ಮಟ್ಟವನ್ನು ಮೀರಿವೆ ನದಿ ತೀರದ ಜನರು ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಬೆಳಗಾವಿ ಸೇರಿದಂತೆ ಜಿಲ್ಲೆಯ ಅನೇಕ ಪಟ್ಟಣಗಳಲ್ಲಿನ ನಾಲಾಗಳು ಮಳೆಯ ನೀರಿನಿಂದ ತುಂಭಿ ಅಕ್ಕ ಪಕ್ಕದ ಮನೆ, ಅಂಗಡಿಗಳನ್ನು ಧೂಳಿ ಪಟ ಮಾಡಿವೆ. ಮನೆಗಳು ನೀರಿನಲ್ಲಿ ಕರುಗುತ್ತಿವೆ. ನದಿ ತೀರದ ಜಮೀನುಗಳ ಜೊತೆಗೆ ಇನ್ನುಳಿದ ಪ್ರದೇಶದಲ್ಲಿ ಮಳೆ ಜೋರಾಗಿ ಸುರಿಯುತ್ತಿರುವುದ್ದರಿಂದ ನೀರಿನಲ್ಲಿ ನಿಂತುಕೊಂಡಿವೆ.
ಬುಧವಾರ ಜಿಲ್ಲೆಯ ಅಥಣಿ-11.2 ಮಿ.ಮಿ, ಬೈಲಹೊಂಗಲ-1.6 ಮಿ.ಮಿ, ಬೆಳಗಾವಿ-0.6.ಮಿ.ಮಿ, ಚಿಕ್ಕೋಡಿ-2.5 ಮಿ.ಮಿ, ಗೋಕಾಕ-9.3 ಮಿ.ಮಿ, ಹುಕ್ಕೇರಿ-10.7 ಮಿ.ಮಿ, ಖಾನಾಪೂರ-7.5 ಮಿ.ಮಿ, ಕಿತ್ತೂರು-15.3 ಮಿ.ಮಿ, ಮೂಡಲಗಿ-9.3 ಮಿ.ಮಿ,
ನಿಪ್ಪಾಣಿ-6.8 ಮಿ.ಮಿ,
ರಾಯಬಾಗ-1.8 ಮಿ.ಮಿ, ರಾಮದುರ್ಗ-0.0 ಮಿ.ಮಿ ಹಾಗೂ ಸವದತ್ತಿ ತಾಲೂಕಿನಲ್ಲಿ-36.2 ಮಿ.ಮಿ ಮಳೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss