ಬೆಳಗಾವಿ: ಭಾನುವಾರ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ಮೃತ್ಯು ಮೃದಂಗ ಮುಂದುವರೆದಿದೆ. ಒಂದೇ ದಿನ 5 ಜನರು ಸಾವನಪ್ಪಿದ್ದು ಮೃತರ ಸಂಖ್ಯೆ 283 ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಭಾನುವಾರ 184 ಜನರಲ್ಲಿ ಸೋಂಕು ವಕ್ಕರಿಸಿದೆ. ಸೋಂಕಿತರ ಸಂಖ್ಯೆ 19008 ಕ್ಕೆ ಏರಿಕೆಯಾಗಿದೆ.
19008 ಸೋಂಕಿತ ಜನರಲ್ಲಿ ಇದುವರೆಗೆ 16358 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, 2367 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಭಾನುವಾರದ ವರೆಗೆ 283 ಜನರು ಕೊರೋನಾ ವೈರಸ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.