ಬೆಳಗಾವಿ : ಜಿಲ್ಲೆಯಲ್ಲಿ ಕೊರೋನಾ ಮೃತ್ಯು ಮೃದಂಗ ಮುಂದುವರೆದಿದ್ದು ಓರ್ವ ಮೃತಪಟ್ಟಿದ್ದು, ಮೃತರ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ.
ಮಂಗಳವಾರ 263 ಜನರಲ್ಲಿ ಸೋಂಕು ವಕ್ಕರಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3944 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸೋಂಕಿತ 3944 ಜನರಲ್ಲಿ ಮಂಗಳವಾರ ಆಸ್ಪತ್ರೆಯಿಂದ 28 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಯಾಗಿದ್ದು, ಒಟ್ಟು
1082 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಇದುವರೆಗೆ ಬಿಡುಗಡೆಯಾಗಿದ್ದಾರೆ. 86 ಜನರು ಮಂಗಳವಾರದ ವರೆಗೆ ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದು, 2776 ಜನರಲ್ಲಿ ಸೋಂಕು ಸಕ್ರಿಯವಾಗಿದೆ.