ಬೆಳಗಾವಿ : ಮಂಗಳವಾರ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗಿದ್ದು, 179 ಜನರಲ್ಲಿ ಸೋಂಕು ವಕ್ಕರಿಸಿದೆ. ಸೋಂಕಿತರ ಸಂಖ್ಯೆ 18160ಕ್ಕೆ ಏರಿಕೆಯಾಗಿದೆ.
18160 ಸೋಂಕಿತ ಜನರಲ್ಲಿ ಇದುವರೆಗೆ 15802 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, 2086 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಮಂಗಳವಾರದ ವರೆಗೆ ಜಿಲ್ಲೆಯಲ್ಲಿ 272 ಜನರು ಕೊರೋನಾ ವೈರಸ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.