ಬೆಳಗಾವಿ : ಇಡೀ ಜಗತ್ತನೇ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಯನ್ನು ತಲ್ಲಣಗೊಳಿಸಿದೆ. 2 ವರ್ಷದ ಮಗು ಸೇರಿದಂತೆ ಒಂದೇ ದಿನ 51 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 211 ಕ್ಕೆ ಏರಿಕೆಯಾಗಿದೆ.
ಮಂಗಳವಾರ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲಟೆನ್ ದಲ್ಲಿ ಹುಕ್ಕೇರಿ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ ಮಹಾರಾಷ್ಟ್ರದ ನಂಜು ತಗುಲಿದ ಪರಿಣಾಮ 2 ವರ್ಷದ ಮಗು ಸೇರಿದಂತೆ 51 ಜನರಲ್ಲಿ ಸೋಂಕು ದೃಢಪಟ್ಟಿದೆ.
ಹುಕ್ಕೇರಿ ತಾಲೂಕಿನ ಯಮಕನಮರ್ಡಿ ಕ್ಷೇತ್ರದ ದಡ್ಡಿ, ಕೋಟ್, ಬೀದ್ರೆವಾಡಿ, ದುಂಡಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮೆರದಿದೆ.
ಬೆಳಗಾವಿ ತಾಲ್ಲೂಕಿನ ಅತವಾಡ-6, ಸಾಂಬ್ರಾ-1, ಮುತಗಾ- 2, ಉಚಗಾಂವ-3, ಸುಳಗಾ -2, ಬಾಳೇಕುಂದ್ರಿ ಕೆ. ಎಚ್-1 ಹೀಗೆ ಇಲ್ಲಿ 15 ಪ್ರಕರಣಗಳು ವರದಿಯಾಗಿವೆ.
ಹುಕ್ಕೇರಿ ತಾಲ್ಲೂಕಿನ ದಡ್ಡಿ – 12, ಕೋಟ್ – 3, ಮೋದಗಾ -2, ಮನಗುತ್ತಿ – 2 , ಬೀದ್ರೇವಾಡಿ – 1, ದುಂಡಗಟ್ಟಿ 2, ಹೀಗೆ ಒಟ್ಟು 22 ಜನರಿಗೆ ಕೊರೋನಾ ವೈರಸ್ ತಗುಲಿದ ವರದಿಯಾಗಿದೆ.
ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ ತಾಲೂಕಾಡಳಿತ ಹರ ಸಾಹಸ ಮಾಡಿ ಪಾಸಿಟಿವ್ ಜನರನ್ನು ಸ್ಥಳಾಂತರ ಮಾಡಿದೆ. ಒಂದೇ ದಿನ ಅರ್ಧ ಶತಕ ಬಾರಿಸಿ, 211 ಕ್ಕೆ ಸೋಂಕು ಏರಿಕೆಯಾಗಿರುವುದ್ದರಿಂದ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.