Monday, August 8, 2022

Latest Posts

ಬೆಳಗಾವಿ ಜಿಲ್ಲೆಯಲ್ಲಿ 260 ಜನರು ಗುಣಮುಖ, 151 ಜನರಲ್ಲಿ ಕೊರೋನಾ

ಬೆಳಗಾವಿ : ಭಾನುವಾರ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಮೃತ್ಯು ಮೃದಂಗ ಮುಂದುವರೆದಿದೆ.
ಹೊಸದಾಗಿ 151 ಜನರಲ್ಲಿ ಕೊರೋನಾ ವೈರಸ್ ಸೋಂಕು ತಗುಲಿದ್ದು, 260 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೋನಾ ಮೃತ್ಯು ಮೃದಂಗಕ್ಕೆ ಭಾನುವಾರ 6 ಜನರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 269 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17810 ಕ್ಕೆ ಏರಿಕೆಯಾಗಿದ್ದು
ಭಾನುವಾರ ಒಂದೇ ದಿನ 260 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 17810 ಸೋಂಕಿತರಲ್ಲಿ ಇದುವರೆಗೆ 15361 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, 2180 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss