ಬೆಳಗಾವಿ : ಜಿಲ್ಲೆಯಲ್ಲಿ ಶುಕ್ರವಾರ 390 ಜನರಲ್ಲಿ ಸೋಂಕು ವಕ್ಕರಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4856 ಕ್ಕೆ ಏರಿಕೆಯಾಗಿದೆ. ಕೊರೋನಾ ಮೃತ್ಯು ಮೃದಂಗ ಮುಂದುವರೆದಿದ್ದು ಶುಕ್ರವಾರ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 93 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಸೋಂಕಿತ 4856 ಜನರಲ್ಲಿ ಶುಕ್ರವಾರ ಆಸ್ಪತ್ರೆಯಿಂದ 52 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು
1230 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಇದುವರೆಗೆ ಬಿಡುಗಡೆಯಾಗಿದ್ದಾರೆ. 93 ಜನರು ಶುಕ್ರವಾರದ ವರೆಗೆ ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದು, 3533 ಜನರಲ್ಲಿ ಸೋಂಕು ಸಕ್ರಿಯವಾಗಿದೆ.