ಬೆಳಗಾವಿ: ಸೋಮವಾರ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ಮೃತ್ಯು ಮೃದಂಗ ಮುಂದುವರೆದಿದೆ. ಒಂದೇ ದಿನ 4 ಜನ ಸಾವನಪ್ಪಿದ್ದು ಮೃತರ ಸಂಖ್ಯೆ 287 ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಸೋಮವಾರ 78 ಜನರಲ್ಲಿ ಸೋಂಕು ವಕ್ಕರಿಸಿದೆ. ಸೋಂಕಿತರ ಸಂಖ್ಯೆ 19086 ಕ್ಕೆ ಏರಿಕೆಯಾಗಿದೆ. 208 ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
19086 ಸೋಂಕಿತ ಜನರಲ್ಲಿ ಇದುವರೆಗೆ 16507 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದರೆ, 2292 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಭಾನುವಾರದ ವರೆಗೆ 287 ಜನರು ಕೊರೋನಾ ವೈರಸ್ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.