ಬೆಳಗಾವಿ: ಮುಂಬೈನಿಂದ ಆಗಮಿಸಿರುವ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 127 ಕ್ಕೆ ಏರಿಕೆಯಾಗಿದೆ.
ಶನಿವಾರ ಆರೋಗ್ಯ ಇಲಾಖೆಯ ಬುಲಟೆನ್ ದಲ್ಲಿ 27 ವರ್ಷದ ನಾಲ್ಕು ತಿಂಗಳ ಗರ್ಭಿಣಿಯಲ್ಲಿ ಸೋಂಕು ಧೃಡವಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ಈ ಮಹಿಳೆ ಮೇ 17 ರಂದು ಮುಂಬೈನಿಂದ ಶಿವಪೇಟೆಗೆ ಮರಳಿದ್ದಳು. ನಂತರ ರಾಮದುರ್ಗದಲ್ಲಿ ಸ್ವ್ಯಾಬ್ ಟೆಸ್ಟ್ ನಡೆಸಿ, ರಾಮದುರ್ಗದ ಹಾಸ್ಟೆಲ್ ನಲ್ಲಿ ಕ್ವಾರಂಟೇನ್ ಮಾಡಲಾಗಿತ್ತು. ಸೋಂಕು ಧೃಡವಾದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.