Wednesday, June 29, 2022

Latest Posts

ಬೆಳಗಾವಿ: ಪ್ರಯಾಣಿಕರ ತಪಾಸಣೆ‌ ವೇಳೆ ಎಕೆ 47 ಬಂದೂಕಿನ ಗುಂಡು ಪತ್ತೆ

ಬೆಳಗಾವಿ : ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೆಎಸ್ಐಎಸ್ಎಫ್ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ನಡೆಸುವ ಸಮಯದಲ್ಲಿ ಸುಬೇದಾರ್ ಅರುಣ್ ಭೋಸಲೆ‌ ಎನ್ನುವರ ಬಳಿ ಎಕೆ 47ನ ಬಂದೂಕಿನ ಜೀವಂತ ಗುಂಡು ಒಂದು ಪತ್ತೆಯಾಗಿದೆ. ಇದರ ಜೊತೆಗೆ ಒಂದು ಇನ್ಸಾಸ್ ಫೈರ್ಡ್ ಎಂಪ್ಟಿ ಕೇಸ್ ಸಹ ದೊರೆತಿದೆ.

ಸುಬೇದಾರ್ ಅರುಣ್ ಭೋಸಲೆ‌ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೈನಿಕನನ್ನು ಪೊಲೀಸರು ಎಂಎಲ್‌ಐಆರ್‌ಸಿ ವಶಕ್ಕೆ ನೀಡಿದ್ದಾರೆ‌.

ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಅಧಿಕಾರಿಗಳು ಸೈನಿಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss