Tuesday, August 9, 2022

Latest Posts

ಬೆಳಗಾವಿ| ಬೆಂಗಳೂರುನಿಂದ 8 ಜನರನ್ನು ಹೊತ್ತು ಬಂದ ಸ್ಟಾರ್ ಏರ್ ಲೈನ್ಸ್ ವಿಮಾನ

ಬೆಳಗಾವಿ: ಕಳೆದ ಎರಡು ತಿಂಗಳಗಳ ಲಾಕ್ ಡೌನ್ ನಂತರ ಸೋಮವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೆಂಗಳೂರುನಿಂದ 8 ಜನರನ್ನು ಹೊತ್ತ ಸ್ಟಾರ್ ಏರ್ ಲೈನ್ಸ್ ನ ಮೊದಲ ವಿಮಾನ ಬಂದಿಳಿಯಿತು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಲಾಕ್ ಡೌನ್ ನಿಂದ ಸ್ಥಬ್ದಗೊಂಡು ಭರ್ತಿ 2 ತಿಂಗಳು 2 ದಿನ ಕಳೆದಿದೆ. ಕೇಂದ್ರೀಯ ನಾಗರೀಕ ವಿಮಾನಯಾನ ಸಚಿವಾಲಯದ ಆದೇಶದಂತೆ ಸೋಮವಾರ ಮತ್ತೆ ವಿಮಾನ ಹಾರಾಟದ ಮೂಲಕ ತನ್ನ ಕಾರ್ಯಾರಂಭವನ್ನು ಆರಂಭಿಸಿತು.

ಬೆಳಿಗ್ಗೆ 8 ಗಂಟೆ 15 ನಿಮಿಷಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ 8 ಜನ ಪ್ರಯಾಣಿಕರಿದ್ದ ಲಾಕ್‍ಡೌನ್ ನಂತರ ಸ್ಟಾರ್ ಏರ್ ಲೈನ್ಸ್ ನ ಮೊದಲ ವಿಮಾನ ಬಂದಿಳಿಯಿತು. ನಂತರ 9 ಗಂಟೆ 3 ನಿಮಿಷಕ್ಕೆ 9 ಜನ ಪ್ರಯಾಣಿಕರನ್ನ ಹೊತ್ತು ಅಹಮದಾಬಾದ್ ಕಡೆಗೆ ಹಾರಿತು.

ಬೆಂಗಳೂರಿನಿಂದ ಬೆಳಗಾವಿಗೆ 8.45ಕ್ಕೆ ಮೊದಲ ವಿಮಾನ ಆಗಮನವಾಗಿದೆ.  ಅಹಮದಾಬಾದ್, ಪುಣೆ, ಮುಂಬೈ, ಬೆಂಗಳೂರು, ಮೈಸೂರಿನಿಂದ ವಿಮಾನಗಳು ತಮ್ಮ ಹಾರಾಟ ನಡೆಸಲಿವೆ.

ಈಗಾಗಲೇ  ಸಾಂಬ್ರಾ  ಏರ್ ಪೋರ್ಟ್ ನಲ್ಲಿ ಮಾರ್ಕಿಂಗ್ ಹಾಗೂ ಸ್ಯಾನಿಟೈಸರ್ ಸಿಂಪಡಣೆ ವ್ಯವಸ್ಥಿತವಾಗಿ ಮಾಡಲಾಗಿದ್ದು, ನಿರಂತರ ಈ ಕ್ರಿಯೆ ಮುಂದುವರೆಯಲಿದೆ. ಹೊರ ರಾಜ್ಯದಿಂದ ಬರುವ ವಿಮಾನಗಳಲ್ಲಿನ ಪ್ರಯಾಣಿಕರಿಗೆ ಜಿಲ್ಲಾಡಳಿತ ಕ್ವಾರಂಟೇನ್ ಮಾಡಲಿದ್ದು, ಏರ್ ಪೋರ್ಟ್ ನಿಂದ ಬಸ್ ಮೂಲಕ ಕರೆದುಕೊಂಡು ಬಂದು ಏಳು ದಿನಗಳ ಕ್ವಾರಂಟೇನ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss