ಬೆಳಗಾವಿ : ತಾಲೂಕಿನ ಪಣಗುತ್ತಿ ಗ್ರಾಮದಲ್ಲಿ ಕಳೆದ ಜೂನ್ 24 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಲ್ಲಪ್ಪಾ ಗಂಗಪ್ಪಾ ಗೌಡನ್ನವರ ಎನ್ನುವರ ಮನೆಗೆ ಹಿಂಬದಿಯಿಂದ ನುಗ್ಗಿದ ಅದೆ ಗ್ರಾಮದ ಕಳ್ಳನೊಬ್ಬ 2,39,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 1,35,000 ರೂ. ನಗದು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಕಾಕತಿ ಪೋಲಿಸರು ಬಂಧಿಸಿ, ಆತನಿಂದ ಸುಮಾರು 2,71,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಣಗುತ್ತಿ ಗ್ರಾಮದ ಯಲ್ಲಪ್ಪಾ ಭಿಮಪ್ಪಾ ನಾಯಿಕ (27) ಬಂಧಿತ ಆರೋಪಿ. ಈತ ಯಲ್ಲಪ್ಪಾ ಗೌಡನ್ನವರ ಮನೆಯಲ್ಲಿ ಕದ್ದ ಚಿನ್ನಾಭರಣಗಳನ್ನು ಹುಕ್ಕೇರಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಬಚ್ಚಿಟ್ಟಿದ್ದ.
ಕಳ್ಳತನದ ಪ್ರಕರಣನ್ನು ಗಂಭಿರವಾಗಿ ಪರಿಗಣಿಸಿದ್ದ ಬೆಳಗಾವಿ ನಗರ ಪೋಲಿಸ್ ಆಯುಕ್ತ ಕೆ. ತ್ಯಾಗರಾಜನ್ , ಡಿಸಿಪಿ ವಿಕ್ರಂ ಅಮಟೆ, ಚಂದ್ರಶೇಖರ ನಿಲಗಾರ, ಎಸಿಪಿ ಶಿವಾರೇಡ್ಡಿ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದ ಕಾಕತಿ ಪಿಐ ರಾಘವೇಂದ್ರ ಹಳ್ಳೂರ, ಪಿಎಸ್ಐ ಅವಿನಾಶ ಯರಗೊಪ್ಪ, ಪಿಎಸ್ಐ ಕ್ರೈಂ ಆರ್ ಟಿ ಲಕ್ಕನಗೌಡರ ಹಾಗೂ ಸಿಬ್ಬಂದಿಗಳು ಸೇರಿ ಕಳ್ಳನನ್ನು ಹಿಡಿದಿದ್ದಾರೆ. ಕಾಕತಿ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅಭಿನಂದನೆ ಸಲ್ಲಿಸಿದ್ದಾರೆ.