ಬೆಳಗಾವಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಮನೆ ಬಾಡಿಗೆ ನೀಡದಿದ್ದಕ್ಕೆ ಮನೆಯ ಮಾಲಿಕನಿಂದ ಬಾಡಿಗೆ ನೀಡುವಂತೆ ಒತ್ತಾಯಿಸಿ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಚಿಕ್ಕೋಡಿ ಪಟ್ಟಣದ ಬಿ ಕೆ ಕಾಲೇಜ್ ಹತ್ತಿರ ಈ ಘಟನೆ ನಡೆದಿದೆ. ಬಾಡಿಗೆದಾರ ಶ್ರೀಮಂತ ದಿಕ್ಷೀತ ಕುಟುಂಬ ಕಳೆದ ೮ ತಿಂಗಳಿನಿಂದ ಬಾಡಿಗೆ ನೂರಮಹಮ್ಮದ ಶಾಪುರಕರ ಎನ್ನುವರ ಮನೆಯಲ್ಲಿ ಬಾಡಿಗೆ ಇದ್ದರು. ಲಾಕಡೌನ್ ಹಿನ್ನಲೆ ಕಳೆದ ಎರಡು ತಿಂಗಳಿನಿಂದ ಬಾಡಿಗೆ ನೀಡಿರಲ್ಲಿಲ್ಲ. ತಕ್ಷಣವೇ ಬಾಡಿಗೆ ನೀಡಬೇಕು ಇಲ್ಲಾ ಮನೆ ಖಾಲಿ ಮಾಡಬೇಕು ಎಂದು ಮನೆ ಮಾಲಿಕ ನೂರಮಹಮ್ಮದ ಶಾಪುರಕರ ತನ್ನ ಡಬಲ್ ಬಾರ್ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಜೀವಕ್ಕೆ ಹೆದರಿ ಬಾಡಿಗೆದಾರ ಶ್ರೀಮಂತ ದಿಕ್ಷೀತ ಕುಟುಂಬ ರಾತ್ರಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮನೆ ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿದ್ದರು. ನೂರಹಮ್ಮದ್ ಶಾಪುರಕರ ವಿರುದ್ಧ ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.