ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಪ್ರಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದ ಸಿದ್ದನಗೌಡ ಪಾಟೀಲ್ ಬುಧವಾರ ನಿಧನರಾಗಿದ್ದಾರೆ .
87 ವರ್ಷದ ಸಿದ್ದನಗೌಡ ಪಾಟೀಲ್ ಅವರು ತಮ್ಮ ಹಿಂದೆ ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ .
ಬೆಳಗಾವಿ ಗಡಿ ಭಾಗದಲ್ಲಿ ಕನ್ನಡ ಪರ ಹೋರಾಟಗಳಲ್ಲಿ ಸದಾ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದ ಸಿದ್ದನಗೌಡ ಪಾಟೀಲ ಅವರು ಬೆಳಗಾವಿ ಮಹಾನಗರ ಪಾಲಿಕೆಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಪ್ರಪ್ರಥಮ ಬಾರಿಗೆ ಮಹಾಪೌರರಾಗಿ ಆಯ್ಕೆಯಾಗಿದ್ದ ಅವರು ಬೆಳಗಾವಿಯ ಪ್ರಪ್ರಥಮ ಕನ್ನಡ ಭಾಷಿಕ ಮಹಾಪೌರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು .
ಕರ್ನಾಟಕ ಗ್ರಾಹಕರ ಮಹಾಮಂಡಳಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸಿದ್ದರು. ಸಿದ್ದನಗೌಡಾ ಪಾಟೀಲ ಅವರ ಸಾವಿನಿಂದ ಬೆಳಗಾವಿಯಲ್ಲಿ ಕನ್ನಡದ ಓರ್ವ ಹೋರಾಟಗಾರರನ್ನು ಕಳೆದುಕೊಂಡತ್ತಾಗಿದೆ. ಮಾಜಿ ಮಹಾಪೌರರ ನಿಧನಕ್ಕೆ ಡಿಸಿಎಂ ಲಕ್ಷ್ಮಣ ಸವದಿ, ಕೇಂದ್ರ ಸಚಿವ ಸುರೇಶ ಅಂಗಡಿ, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮೀಡದಿದ್ದಾರೆ